Webdunia - Bharat's app for daily news and videos

Install App

ವೀಕ್ಷಕರ ಕಡಿಮೆ ವೋಟ್ ಪಡೆದು ಬಿಗ್ ಬಾಸ್ ಪ್ರವೇಶಿಸಿದ್ದ ಕಾರ್ತಿಕ್ ವಿನ್ನರ್ ಆಗಿ ಹೊರಬಂದರು

Krishnaveni K
ಸೋಮವಾರ, 29 ಜನವರಿ 2024 (09:00 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದಾರೆ. ಕಿಚ್ಚ ಸುದೀಪ್ ಫೈನಲ್ ನಲ್ಲಿ ಕಾರ್ತಿಕ್ ಹೆಸರು ಘೋಷಣೆ ಮಾಡಿದ್ದಾರೆ.

ಡ್ರೋಣ್ ಪ್ರತಾಪ್ ಮೊದಲ ರನ್ನರ್ ಅಪ್ ಮತ್ತು ಸಂಗೀತಾ ಎರಡನೇ ರನ್ನರ್ ಅಪ್ ಆಗಿದ್ದಾರೆ. 112 ದಿನಗಳ ಸುದೀರ್ಘ ಅವಧಿಯಲ್ಲಿ 16 ಸ್ಪರ್ಧಿಗಳೊಂದಿಗೆ ಸೆಣಸಾಡಿ ಕಾರ್ತಿಕ್ ಬಿಗ್ ಬಾಸ್ ವಿನ್ನರ್ ಆದರು. ಬರೋಬ್ಬರಿ 2,97,39,904 ಮತಗಳನ್ನು ಪಡೆದು ಅವರು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಸುಳ್ಳುಗಾರ ಎಂಬ ಹಣೆಪಟ್ಟಿಯೊಂದಿಗೆ ಬಿಗ್ ಬಾಸ್ ಪ್ರವೇಶಿಸಿದ್ದ ಡ್ರೋಣ್ ಪ್ರತಾಪ್ ಇದೀಗ ಸಾಕಷ್ಟು ವೀಕ್ಷಕರ ಬೆಂಬಲ ಗಳಿಸಿಕೊಂಡಿರುವುದು ವಿಶೇಷ. ವಿನ್ನರ್ ಕಾರ್ತಿಕ್ ಮಹೇಶ್ ಗೆ 50 ಲಕ್ಷ ರೂ. ಬಹುಮಾನ ಮತ್ತು ಒಂದು ಕಾರು ಉಡುಗೊರೆಯಾಗಿ ಸಿಗಲಿದೆ. ರನ್ನರ್ ಅಪ್ 10 ಲಕ್ಷ ರೂ. ಬಹುಮಾನ ಪಡೆಯಲಿದ್ದಾರೆ.

ವಿಶೇಷವೆಂದರೆ ಈ ಬಾರಿ ಬಿಗ್ ಬಾಸ್ ಆರಂಭದಲ್ಲಿ ವೀಕ್ಷಕರ ವೋಟಿಂಗ್ ಪಡೆದು 80 ಶೇಕಡಾ ಹೆಚ್ಚು ವೋಟ್ ಪಡೆದ ಸ್ಪರ್ಧಿಗಳನ್ನು ಮಾತ್ರ ಮನೆಯೊಳಗೆ ಕಳುಹಿಸಲಾಗಿತ್ತು. 70-80 ಶೇಕಡಾ ರೇಂಜ್ ನಲ್ಲಿ ವೋಟ್ ಪಡೆದ ಸ್ಪರ್ಧಿಗಳನ್ನು ಡೇಂಜರ್ ಝೋನ್ ನಲ್ಲಿಟ್ಟು ಬಳಿಕ ಒಳಗೆ ಕಳುಹಿಸಲಾಗಿತ್ತು. ಈ ಪೈಕಿ ಕಾರ್ತಿಕ್ ಮಹೇಶ್ ಕೂಡಾ ಒಬ್ಬರು.

ಆದರೆ ಮೊದಲ ವಾರದಿಂದಲೇ ಕಾರ್ತಿಕ್ ಜನರ ಮನ ಗೆಲ್ಲಲು ಸಫಲರಾಗಿದ್ದರು. ಮೊದಲು ಸಂಗೀತಾ ಜೊತೆಗೆ ಸ್ನೇಹಿತರಾಗಿದ್ದ ಕಾರ್ತಿಕ್ ಬಳಿಕ ಕಿತ್ತಾಡಿಕೊಂಡಿದ್ದರು. ಮತ್ತೊಬ್ಬ ಪ್ರಬಲ ಸ್ಪರ್ಧಿ ವಿನಯ್ ಗೆ ಸೆಡ್ಡು ಹೊಡೆದು ನಿಂತು ಸುದ್ದಿಯಾದರು. ನಡುವೆ ಕೆಲವು ವಾರ ಕಾರ್ತಿಕ್ ಕೊಂಚ ಡಲ್ ಆಗಿದ್ದರು. ಹಾಗಿದ್ದರೂ ಕೊನೆ ಕೊನೆಯಲ್ಲಿ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

ಜೈಲಲ್ಲೂ ದರ್ಶನ್‌ಗೆ ಡೆವಿಲ್ ಸಿನಿಮಾದ್ದೇ ಚಿಂತೆ

ವಿಶೇಷ ದಿನದಂದೇ ಮಗನಿಗೆ ನಾಮಕರಣ ಮಾಡಿದ ಸಿಂಹಪ್ರಿಯ ದಂಪತಿ

ಅಜಯ್ ರಾವ್ ವಿಚ್ಛೇದನಕ್ಕೆ ಕಾರಣ ಬಯಲು

ದರ್ಶನ್ ಅರೆಸ್ಟ್ ಆಗಿದ್ದಕ್ಕೆ ರಮ್ಯಾ ಅಚ್ಚರಿಯ ಹೇಳಿಕೆ

ಮುಂದಿನ ಸುದ್ದಿ
Show comments