ಕನ್ನಡ ಕೋಟ್ಯಾಧಿಪತಿಯಲ್ಲಿ ಸ್ಪರ್ಧಿಸಿದ್ದ ಕಾಮಿಡಿ ಕಲಾವಿದನಿಗೆ ಸಿಕ್ಕ ಭರ್ಜರಿ ಅವಕಾಶ!

ಶುಕ್ರವಾರ, 6 ಸೆಪ್ಟಂಬರ್ 2019 (08:58 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಆಡಿ 12 ಲಕ್ಷ ರೂ. ಗೆದ್ದಿದ್ದ ಎಂಬಿ ಹೊಸಳ್ಳಿ ಎಂಬ ಕಾಮಿಡಿ ಕಲಾವಿದನಿಗೆ ಈಗ ಕಲರ್ಸ್ ವಾಹಿನಿ ಅವಕಾಶ ಕೊಟ್ಟಿದೆ.


ತನ್ನದೇ ಮನೆ ಕಟ್ಟಿಕೊಳ್ಳುವ ಕನಸು ಹೊತ್ತು ಕೋಟ್ಯಾಧಿಪತಿ ಆಡಿದ್ದ ಎಂಬಿ ಹೊಸಳ್ಳಿ ತಾನು ಹಾಸ್ಯ ಕಲಾವಿದ. ತನಗೊಂದು ಅವಕಾಶ ಸಿಕ್ಕರೆ ತನ್ನ ಪ್ರತಿಭೆಯನ್ನು ಸಾಬೀತು ಮಾಡುವುದಾಗಿ ಪುನೀತ್ ರಾಜ್ ಕುಮಾರ್ ಎದುರು ಹೇಳಿಕೊಳ್ಳುತ್ತಾರೆ.

ಇದೀಗ ಎಂಬಿ ಹೊಸಳ್ಳಿಗೆ ಕಲರ್ಸ್ ವಾಹಿನಿ ತನ್ನ ಕಾಮಿಡಿ ಕಂಪನಿ ಕಾರ್ಯಕ್ರಮದಲ್ಲಿ ತನ್ನ ಪ್ರತಿಭೆ ತೋರ್ಪಡಿಸಲು ಅವಕಾಶ ಮಾಡಿಕೊಟ್ಟಿದೆ. ಎಂಬಿ ಹೊಸಳ್ಳಿ ಎಂತಹಾ ಕಲಾವಿದ ಎಂಬುದು ಈ ವಾರದ ಕಾಮಿಡಿ ಕಂಪನಿ ಕಾರ್ಯಕ್ರಮದಲ್ಲಿ ತಿಳಿದುಬರಲಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗೋಲ್ಡನ್ ಸ್ಟಾರ್ ಗಣೇಶ್ ರೊಮ್ಯಾಂಟಿಕ್ ಹಾಡು ನಾಳೆ ರಿಲೀಸ್