ಆತ್ಮಹತ್ಯೆ ಮಾಡಿಕೊಂಡ ಸುಶೀಲ್ ಗೌಡ ಬಗ್ಗೆ ನಿಜ ವಿಚಾರ ಬಹಿರಂಗಪಡಿಸಿದ ನಟ ಚಂದನ್ ಕುಮಾರ್

Webdunia
ಗುರುವಾರ, 9 ಜುಲೈ 2020 (09:29 IST)
ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದ ಕನ್ನಡ ಕಿರುತೆರೆ ನಟ ಸುಶೀಲ್ ಗೌಡ ಬಗ್ಗೆ ಕಿರುತೆರೆಯ ಖ್ಯಾತ ನಾಯಕ ನಟ ಚಂದನ್ ಕುಮಾರ್ ಹೇಳಿಕೊಂಡಿದ್ದಾರೆ.


ಸುಶೀಲ್ ರನ್ನು 15 ವರ್ಷಗಳಿಂದ ಬಲ್ಲ ಚಂದನ್ ಅವರ ನಿಜ ಜೀವನದ ಬಗ್ಗೆ ಬಹಿರಂಗಪಡಿಸಿದ್ದಾರೆ. ‘ನನ್ನ ಗೆಳೆಯನ ಸಹೋದರ ಮತ್ತು ಕಾಲೇಜಿನಲ್ಲಿ ನನ್ನ ಜ್ಯೂನಿಯರ್ ಆಗಿದ್ದ ಸುಶೀಲ್ ನನಗೆ 15 ವರ್ಷಗಳಿಂದ ಪರಿಚಯ.

ಆತ ಒಬ್ಬ ಇಂಜಿನಿಯರ್, ಮಹತ್ವಾಕಾಂಕ್ಷಿ ಆದರೆ ನಟನಾಗಿ ಬೆಳೆಯಲು ಕಷ್ಟಪಡುತ್ತಿದ್ದ. ತುಂಬಾ ನಾಚಿಕೆ ಸ್ವಭಾವದವ. ಆದರೆ ಸಹೋದರ ನೀನು ಹೀಗೆ ಮಾಡಿಕೊಂಡಿದ್ದು ಸರಿಯಲ್ಲ. ನಿನ್ನ ಕುಟುಂಬ ಮತ್ತು ಸ್ನೇಹಿತರನ್ನು ದುಃಖಕ್ಕೆ ದೂಡಿ ನೀನು ಹೋದೆ.

ಕೆಲವು ವರ್ಷಗಳ ಹಿಂದೆ ನಿನಗೆ ಆಕ್ಸಿಡೆಂಟ್ ಆಗಿ ದವಡೆ, ಮೂಳೆಗೆ ವಿಪರೀತ ಪೆಟ್ಟಾಗಿತ್ತು. ಆದರೆ ನೀನು ಕಮ್ ಬ್ಯಾಕ್ ಮಾಡಿದೆ. ನಿನ್ನ ಸುತ್ತಲಿದ್ದವರಿಗೆ ಸ್ಪೂರ್ತಿಯಾದೆ. ಆದರೆ ಈಗ ನಿನ್ನ ಕುಟುಂಬದವರನ್ನು ಜೀವನಪರ್ಯಂತ ಅಶಾಂತಿಗೆ ದೂಡಿ ನೀನು ಶಾಂತಿಯುತವಾಗಿ ವಿರಮಿಸಿರುವೆ. ಇದು ದುರಂತ’ ಎಂದು ಚಂದನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿಯೇ ಪ್ರಮುಖ ಟಾರ್ಗೆಟ್‌: ಮತ್ತೊರ್ವ ಮಹಿಳಾ ಸ್ಪರ್ಧಿ ಕಿರಿಕ್‌

ಕಿಚ್ಚ ಸುದೀಪ್ ಗೆ ಈ ವಿಚಾರದಲ್ಲಿ ಬಲವಂತ ಮಾಡಿದ್ದೇ ಪತ್ನಿ ಪ್ರಿಯಾ

ಬೆಳಕಿಲ್ಲದ ದೀಪಾವಳಿಯೊಂದಿಗೆ ನಟ ದರ್ಶನ್‌ಗೆ ಬೆನ್ನು ನೋವಿನ ಸಂಕಟ

ಮುಂದಿನ ಸುದ್ದಿ
Show comments