Webdunia - Bharat's app for daily news and videos

Install App

ನಿಶ್ಚಿತಾರ್ಥ ಮಾಡಿಕೊಂಡ ನಟಿ ನಯನಾ ನಾಗರಾಜ್: ಲೈವ್ ನಲ್ಲಿ ಅಂದು ಹೇಳಿದ್ದು ನಿಜವಾಯ್ತು

Krishnaveni K
ಸೋಮವಾರ, 4 ಮಾರ್ಚ್ 2024 (08:37 IST)
Photo Courtesy: Instagram
ಬೆಂಗಳೂರು: ಗಿಣಿರಾಮ ಧಾರವಾಹಿಯಲ್ಲಿ ನಾಯಕಿ ಪಾತ್ರ ಮಾಡುತ್ತಿದ್ದನ ನಟಿ, ಗಾಯಕಿ ನಯನಾ ನಾಗರಾಜ್ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸರಳವಾಗಿ ಮನೆಯಲ್ಲಿಯೇ ನಿಶ್ಚಿತಾರ್ಥ ನಡೆದಿದೆ.

ನಯನಾ ನಾಗರಾಜ್ ಮತ್ತು ಸುಹಾಸ್ ಶಿವಣ್ಣ ನಿಶ್ಚಿತಾರ್ಥ ಮನೆಯಲ್ಲಿಯೇ ಸರಳವಾಗಿ ನೆರವೇರಿದ್ದು, ಈ ವಿವಾಹ ನಿಶ್ಚಿತಾರ್ಥದ ಫೋಟೋ, ವಿಡಿಯೋಗಳನ್ನು ನಯನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಇದೀಗ ಮನೆಯಲ್ಲಿಯೇ ಸರಳವಾಗಿ ಹೂ ಮುಡಿಸಿ ಉಂಗುರ ಬದಲಾಯಿಸುವ ಶಾಸ್ತ್ರ ನೆರವೇರಿದೆ. ಹೆಚ್ಚು ಅದ್ಧೂರಿ, ಆಡಂಭರವಿಲ್ಲದೇ ಕಾರ್ಯಕ್ರಮ ಮುಗಿದಿದೆ. ಸಾಮಾನ್ಯವಾಗಿ ಇತ್ತೀಚೆಗಿನ ದಿನಗಳಲ್ಲಿ ನಟಿಯರು ಅದ್ಧೂರಿಯಾಗಿ ನಿಶ್ಚಿತಾರ್ಥ, ಮದುವೆ ಮಾಡಿಕೊಳ್ಳುತ್ತಾರೆ. ಆದರೆ ನಯನಾ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಣಿರಾಮ ಧಾರವಾಹಿಯಲ್ಲಿ ನಯನಾ ನಾಯಕಿ ಮಹತಿ ಪಾತ್ರ ಮಾಡುತ್ತಿದ್ದರು. ಆ ಧಾರವಾಹಿ ಮುಕ್ತಾಯವಾದ ಬಳಿಕ ಲೈವ್ ಬಂದಿದ್ದ ನಯನಾ ತಮ್ಮ ಹುಡುಗನ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದರು. ಇದೀಗ ಅದು ನಿಜವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

Ramayana Film: ಇಂದ್ರ ದೇವನ ಪಾತ್ರಕ್ಕೆ ಆಯ್ಕೆಯಾದ ಕುನಾಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಮದುವೆಯಾಗಿ ಇಷ್ಟು ದಿನಕ್ಕೆ ನಟಿ ರಶ್ಮಿ ಪ್ರಭಾಕರ್ ಕೊನೆಗೂ ಕೊಟ್ರು ಗುಡ್ ನ್ಯೂಸ್

ಮುಂದಿನ ಸುದ್ದಿ
Show comments