Webdunia - Bharat's app for daily news and videos

Install App

Deepika Das: ದೀಪಿಕಾ ದಾಸ್ ಪತಿ ಮೋಸಗಾರನಾ: ಯುವಕನ ವಿರುದ್ಧ ದೂರು

Krishnaveni K
ಗುರುವಾರ, 28 ನವೆಂಬರ್ 2024 (15:27 IST)
ಬೆಂಗಳೂರು: ಕನ್ನಡ ಕಿರುತೆರೆ ನಟಿ ದೀಪಿಕಾ ದಾಸ್ ಪತಿ ವಿರುದ್ಧ ಆರೋಪ ಮಾಡಿ ಬೆದರಿಕೆ ಹಾಕಿದ ಯುವಕನೊಬ್ಬನ ಮೇಲೆ ದೀಪಿಕಾ ತಾಯಿ ಪದ್ಮಲತಾ ದೂರು ನೀಡಿದ್ದಾರೆ.

ದೀಪಕ್ ಕುಮಾರ್ ಎಂಬ ಉದ್ಯಮಿಯೊಂದಿಗೆ ದೀಪಿಕಾ ದಾಸ್ ಇತ್ತೀಚೆಗೆ ಮದುವೆಯಾಗಿದ್ದರು. ಆದರೆ ದೀಪಕ್ ಕುಮಾರ್ ಮೋಸಗಾರ ಎಂದು ಯಶವಂತ್ ಎಂಬ ಯವಕ ದೀಪಿಕಾ ತಾಯಿ ಪದ್ಮಲತಾ ಅವರಿಗೆ ಕರೆ ಮಾಡಿ ಇಲ್ಲ ಸಲ್ಲದ ಆರೋಪ ಮಾಡಿದ್ದಾನೆ. ‘ನಿಮ್ಮ ಮಗಳನ್ನು ದೀಪಕ್ ಕುಮಾರ್ ಗೆ ಯಾಕೆ ಮದುವೆ ಮಾಡಿದ್ದೀರಿ. ಆತ ಮೋಸಗಾರ, ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಹಲವು ಪ್ರಕರಣ ಆತನ ಮೇಲಿದೆ, ಜೈಲಿಗೆ ಹೋಗಿ ಬಂದಿದ್ದಾನೆ’ ಎಂದೆಲ್ಲಾ ಹೇಳಿದ್ದ.

ಅಷ್ಟೇ ಅಲ್ಲ, ದೀಪಿಕಾ ದಾಸ್ ಗೂ ಕರೆ ಮಾಡಿದ್ದ ಆತ ಹಣಕ್ಕಾಗಿ ಬೇಡಿಕೆಟ್ಟಿದ್ದಲ್ಲದೆ, ಹಣ ಕೊಡದೇ ಇದ್ದರೆ ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಧಮ್ಕಿ ಹಾಕಿದ್ದ. ದೀಪಕ್ ಕುಮಾರ್ ನಿಂದಾಗಿ ನನಗೆ ನಷ್ಟವಾಗಿದೆ ಎಂದು ಅವರ ಸ್ನೇಹಿತರಿಗೂ ಕರೆ ಮಾಡಿದ್ದಾನೆ.

ಹೀಗಾಗಿ ತಮ್ಮ ಅಳಿಯನ ಬಗ್ಗೆ ಇಲ್ಲ ಸಲ್ಲದ ಪ್ರಚಾರ ಮಾಡಿ ಮಾನ ಹಾನಿ ಮಾಡುತ್ತಿದ್ದಾನೆ ಅಲ್ಲದೆ, ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ದೀಪಿಕಾ ತಾಯಿ ಪದ್ಮಲತಾ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments