Select Your Language

Notifications

webdunia
webdunia
webdunia
webdunia

ದಯಾಳ್ ಮನೆಯಿಂದ ಔಟ್: ಅನುಪಮಾ ಕಣ್ಣೀರಿಗೆ ಕರಗಿದ ಜಗನ್

Dayal padmanabhan
ಬೆಂಗಳೂರು , ಸೋಮವಾರ, 6 ನವೆಂಬರ್ 2017 (13:32 IST)
ಬೆಂಗಳೂರು: ಮೂರೇ ವಾರದಲ್ಲಿ ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳ ನಡುವೆ ಉತ್ತಮ ಬಾಂಧವ್ಯ ಬೆಸೆದುಕೊಂಡಂತಿದೆ.

ದಯಾಳ್‌ ಪದ್ಮನಾಭ್‌ ಬಿಗ್‌ ಬಾಸ್ ಮನೆಯಿಂದ ಮೂರನೇ ವಾರಕ್ಕೆ ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಬರೋಕು ಮೊದಲು ಕೆಲವರ ಜತೆ ಸಿಕ್ಕಾಪಟ್ಟೆ ಜಗಳವಾಡಿಕೊಂಡರೆ, ಇನ್ನು ಕೆಲವರ ಪ್ರೀತಿ ಸಂಪಾದಿಸಿಕೊಂಡಿದ್ದಾರೆ. ಅನುಪಮಾ ಹಾಗೂ ದಯಾಳ್‌ ನಡುವೆ ಕೊಂಚ ಹೆಚ್ಚೇ ಆತ್ಮೀಯತೆ ಬೆಳೆದುಕೊಂಡಿತ್ತು. ದಯಾಳ್‌ ಮನೆಯಿಂದ ಹೊರಹೋಗುವ ವೇಳೆ ಎಲ್ಲರೂ ಭಾವುಕರಾದ್ರೆ, ಅನುಪಮಾ ಕೊಂಚ ಹೆಚ್ಚಿಗೆ ಭಾವುಕರಾಗಿ ಕಣ್ಣೀರು ಹಾಕಿದ್ರು.

ಮನೆಯಿಂದ ಹೊರಹೋಗುವ ಮುನ್ನ ದಯಾಳ್‌ ಕೂಡ ಕಣ್ಣೀರು ಹಾಕಿದ್ರು. ಮೂರ್ನಾಲ್ಕು ಬಾರಿ ಅನುಪಮಾ ಅವರನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದ್ರು. ಇವಳನ್ನು ಚೆನ್ನಾಗಿ ನೋಡ್ಕೊಳ್ಳೆ ಎಂದು ಎಲ್ಲರಿಗೂ ಹೇಳಿ ಹೋದರು. ದಯಾಳ್‌ ಬಿಗ್‌ ಬಾಸ್‌ ಮನೆಯಿಂದ ಹೊರಹೋದ ಮೇಲೆಯೂ ಅನುಪಮಾ ಅಳೋದು ನಿಲ್ಲಿಸಿರಲಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅನುಪಮಾಳ ಬಳಿ ಬಂದ ಜಗನ್‌, ಸಮಾಧಾನ ಹೇಳುವ ಪ್ರಯತ್ನ ಮಾಡಿದ್ರು. ಅವರು ಎಲ್ಲೂ ಹೋಗಿಲ್ಲ. ಹೊರಗಡೆ ಹೋದ ಮೇಲೆ ಸಿಗ್ತಾರೆ ಅಳೋದು ನಿಲ್ಲಿಸು ಎಂದು ಕೇಳಿಕೊಂಡ್ರು ಜಗನ್‌. ನೀನ್ ಹೋಗು ನಾನಿಲ್ಲೆ ಇದ್ದು ಆಮೇಲೆ ಬರ್ತೀನಿ ಎಂದ್ರು ಅನುಪಮಾ.

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ಟಿಯಲ್ಲಿ `ಪದ್ಮಾವತಿ’ಗೆ ಮುತ್ತಿಟ್ಟಿದ್ಯಾರು ಗೊತ್ತಾ…?