ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚಿನ ಹೀರೋಯಿನ್ ಯಾರು ಗೊತ್ತಾ?

Webdunia
ಸೋಮವಾರ, 23 ಆಗಸ್ಟ್ 2021 (08:14 IST)
ಜೀ ಕನ್ನಡ ವಾಹಿನಿಯ 15 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇದಿಕೆಯಲ್ಲಿ ಮಕ್ಕಳ ಪ್ರಶ್ನೆಗೆ ಉತ್ತರಿಸಿದ್ದಾರೆ.

ನಿಮ್ಮ ಮೆಚ್ಚಿನ ಊಟ ಯಾವುದು ಎಂದು ಮಕ್ಕಳು ಕೇಳಿದಾಗ ನಮ್ಮ ತಾಯಿ ಮಾಡಿಕೊಡುವ ಬಿಸಿ ರೊಟ್ಟಿ ಎಂದು ಹೇಳಿದ್ದಾರೆ. ಈಗ ತಾಯಿಯವರು ಇಲ್ಲ. ಬೇರೆಯವರು ಮಾಡಿಕೊಟ್ಟ ರೊಟ್ಟಿಯನ್ನು ತಾಯಿ ಮಾಡಿಕೊಟ್ಟಿದ್ದಾರೆ ಎಂದು ಭಾವಿಸಿ ತಿನ್ನುತ್ತೇನೆ ಎಂದು ಹೇಳಿದ್ದಾರೆ.
ನನ್ನ ಮೆಚ್ಚಿನ ನಟ ರಾಜಕುಮಾರ್. ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು. ಹಾಡು ನನಗೆ ಇಷ್ಟ. ಇದರೊಂದಿಗೆ ಬಾನಿಗೊಂದು ಎಲ್ಲೆ ಎಲ್ಲಿದೆ. ಹಾಡು ಕೂಡ ನನಗೆ ಇಷ್ಟವೆಂದು ತಿಳಿಸಿದ ಸಿಎಂ, ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡು ಹಾಡಿದ್ದಾರೆ.
ನಿಮ್ಮ ಮೆಚ್ಚಿನ ಹೀರೋಯಿನ್ ಯಾರು ಎಂದು ಎದುರಾದ ಪ್ರಶ್ನೆಗೆ ಇದು ತುಂಬಾ ಟಫ್ ಕೊಶ್ಚನ್ ಎಂದು ಹಾಸ್ಯ ಚಟಾಕಿ ಹಾರಿಸಿದ ಸಿಎಂ, ನನಗೆ ಆಲ್ ಟೈಂ ಹೀರೋಯಿನ್ ಮಧುಬಾಲಾ. ನಮ್ಮ ಕಾಲದ ಕನ್ನಡ ನಟಿಯರಾದ ಕಲ್ಪನಾ, ಜಯಂತಿ, ಭಾರತಿ ಮೆಚ್ಚಿನ ನಾಯಕಿಯರು ಎಂದು ತಿಳಿಸಿದ್ದಾರೆ. ನಾನು ಸಿಎಂ ಅಂದ್ರೆ ಕಾಮನ್ ಮ್ಯಾನ್ ಎಂದು ಸಿಎಂ ಹೇಳುವ ಮೂಲಕ ಸರಳತೆ ಮೆರೆದು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತಿದ್ದಾರೆ. ನಿಮ್ಮನ್ನೆಲ್ಲ ನೋಡಿ ಮೊಮ್ಮಗು ಬೇಕು ಎನಿಸುತ್ತಿದೆ. ಮಗನಿಗೆ ಹೇಳುತ್ತೇನೆ ಎಂದು ಚಟಾಕಿ ಹಾರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BB Season 12: ಹೊಸ ಆಟ ಶುರು ಮಾಡಿದ ಅಶ್ವಿನಿ ಗೌಡ ಕಾಟಕ್ಕೆ ಮನೆ ಮಂದಿ ಸುಸ್ತು

ನಾಳೆಯಿಂದ ಕಾಮಿಡಿ ಕಿಲಾಡಿಗಳು ಶೋ ಶುರು, ಜಡ್ಜ್ ಯಾರು ಗೊತ್ತಾ

ಅಬ್ ಕಿ ಬಾರ್, ಮೋದಿ ಸರ್ಕಾರ್ ಘೋಷಣೆ ಹಿಂದಿನ ವ್ಯಕ್ತಿ ಪಿಯೂಷ್ ಪಾಂಡೆ ಇನ್ನಿಲ್ಲ

ವಾರಿಜಾ ವೇಣುಗೋಪಾಲ್ ರನ್ನು ಮದುವೆಯಾದ ರಘು ದೀಕ್ಷಿತ್: ಯಾರೆಲ್ಲಾ ಬಂದಿದ್ರು ನೋಡಿ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಸೂಸೈಡ್‌ ಕೇಸ್‌: ನಟಿ ರಿಯಾ ಚಕ್ರವರ್ತಿಗೆ ಸಿಬಿಐ ಕ್ಲೀನ್‌ಚಿಟ್

ಮುಂದಿನ ಸುದ್ದಿ
Show comments