Webdunia - Bharat's app for daily news and videos

Install App

ಬಿಬಿಕೆ10: ಟಾಪ್ 6 ಸ್ಪರ್ಧಿಗಳಿಗೆ ಸಿಕ್ಕ ಬಹುಮಾನ ಮೊತ್ತದ ವಿವರ

Krishnaveni K
ಸೋಮವಾರ, 29 ಜನವರಿ 2024 (09:19 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಕ್ಕೆ ತೆರೆ ಬಿದ್ದಿದೆ. ಫೈನಲ್ ನಿನ್ನೆಗೆ ಮುಕ್ತಾಯವಾಗಿದ್ದು ವಿನ್ನರ್ ಕಾರ್ತಿಕ್ ಮಹೇಶ್ ಎಂದು ಘೋಷಣೆಯನ್ನೂ ಮಾಡಲಾಗಿದೆ.

ಬಿಗ್ ಬಾಸ್ ಸೀಸನ್ 10 ರಲ್ಲಿ ಕೊನೆಯದಾಗಿ ಉಳಿದುಕೊಂಡು ಟಾಪ್ 6 ಸ್ಪರ್ಧಿಗಳು ಎನಿಸಿಕೊಂಡಿದ್ದು ತುಕಾಲಿ ಸಂತೋಷ್, ವರ್ತೂರು ಸಂತೋಷ್, ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್ ಮತ್ತು ಡ್ರೋಣ್ ಪ್ರತಾಪ್.

ಈ ಪೈಕಿ ಮೊದಲನೆಯವರಾಗಿ ತುಕಾಲಿ ಸಂತೋಷ್ ಮನೆಯಿಂದ ಹೊರಹೋದರು. ಅವರಿಗೆ 2 ಲಕ್ಷ ರೂ. ಬಹುಮಾನ ಮೊತ್ತವನ್ನು ಕಿಚ್ಚ ಸುದೀಪ್ ವೇದಿಕೆಯಲ್ಲಿ ನೀಡಿದರು. ಅದೇ ರೀತಿ ವರ್ತೂರು ಸಂತೋಷ್ ಗೂ 2 ಲಕ್ಷ ರೂ. ಬಹುಮಾನ ಹಣ ಸಿಕ್ಕಿದೆ. ಅವರು ನಾಲ್ಕನೇ ರನ್ನರ್ ಅಪ್ ಆಗಿದ್ದಾರೆ.

ಆದರೆ ಉಳಿದಂತೆ ಮೂರನೇ ರನ್ನರ್ ಅಪ್ ಆಗಿದ್ದ ವಿನಯ್ ಗೌಡ ಅವರಿಗೆ 5 ಲಕ್ಷ ರೂ. ಬಹುಮಾನ ಮೊತ್ತ ಸಿಕ್ಕಿದೆ. ಎರಡನೇ ರನ್ನರ್ ಅಪ್ ಸಂಗೀತಾಗೆ 7 ಲಕ್ಷ ರೂ. ಬಹುಮಾನ ಸಿಕ್ಕಿದೆ. ಮೊದಲ ರನ್ನರ್ ಅಪ್ ಡ್ರೋಣ್ ಪ್ರತಾಪ್  ಗೆ 10 ಲಕ್ಷ ರೂ. ಬಹುಮಾನ ಮೊತ್ತ ಸಿಕ್ಕಿದೆ. ವಿಜೇತರಾದವರಿಗೆ 50 ಲಕ್ಷ ರೂ. ಬಹುಮಾನ ಹಣ ಮತ್ತು ಕಾರು ನೀಡಲಾಗಿದೆ.

ಎಲ್ಲರಿಗೂ ಕಿಚ್ಚ ಸುದೀಪ್ ವೇದಿಕೆಯಲ್ಲಿ ಬಹುಮಾನ ಮೊತ್ತ ನೀಡಿ ಗೌರವಿಸಿದ್ದಾರೆ. ಆದರೆ ಇಷ್ಟು ದಿನ ಬಿಗ್ ಬಾಸ್ ನಲ್ಲಿದ್ದ ಸ್ಪರ್ಧಿಗಳಿಗೆ ಇಷ್ಟೇ ಬಹುಮಾನವಾ ಎಂದು ಕೇಳಬೇಡಿ. ಇದರ ಜೊತೆಗೆ ಸಂಭಾವನೆಯೂ ಮೊದಲೇ ನಿಗದಿಯಾದಂತೆ ಸಿಗಲಿದೆ. ಆದರೆ ಬಿಗ್ ಬಾಸ್ ಗೆದ್ದ ಸ್ಪರ್ಧಿಗೆ ಬಂಪರ್ ಬಹುಮಾನ ಸಿಕ್ಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

IPL 2025 ಸೋಲಿನ ಬಗ್ಗೆ ಕೊನೆಗೂ ಭಾವುಕ ಪೋಸ್ಟ್ ಹಂಚಿಕೊಂಡ ಪಂಜಾಬ್ ಒಡತಿ ಪ್ರೀತಿ ಜಿಂಟಾ

Road Accident: ಕಣ್ಣೆದುರೇ ತಂದೆಯನ್ನು ಕಳೆದುಕೊಂಡ ನಟ ಶೈನ್ ಟಾಮ್ ಚಾಕೊ

Akhil Akkineni Marriage: ಟ್ರೆಂಡಿಂಗ್‌ನಲ್ಲಿದೆ ನಾಗರ್ಜುನ ಮಗನ ಮದುವೆ ಫೋಟೋಗಳು

ಡಿವೋರ್ಸ್ ಬೆನ್ನಲ್ಲೇ ಮತ್ತೇ ಗೆಳತಿ ಜತೆ ಜೋಡಿಯಾಗಿ ಕಾಣಿಸಿಕೊಂಡ ನಟ ಜಯಂ ರವಿ, ಇದು ಅದೇ ಎಂದ ನೆಟ್ಟಿಗರು

Rakshit Shetty Birthday: ಫ್ರೆಂಡ್ ಗೆ ಗುಡ್ ನ್ಯೂಸ್ ಕೊಡಕ್ಕೆ ಹೇಳಿ ರಿಷಭ್ ಶೆಟ್ರೇ...

ಮುಂದಿನ ಸುದ್ದಿ
Show comments