Publish Date: Wed, 12 May 2021 (09:11 IST)
Updated Date: Wed, 12 May 2021 (09:13 IST)
ಬೆಂಗಳೂರು: ಕೊರೋನಾದಿಂದಾಗಿ ಅರ್ಧಕ್ಕೇ ನಿಂತ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಅಂತಿಮ ಎಪಿಸೋಡ್ ಇಂದು ಪ್ರಸಾರವಾಗಲಿದೆ.
ಈಗಾಗಲೇ ಬಿಗ್ ಬಾಸ್ ಸದಸ್ಯರನ್ನು ಮನೆಯಿಂದ ಹೊರಗೆ ಕರೆದು ತಂಡಗಳಾಗಿ ಅವರ ಮನೆಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಕಲರ್ಸ್ ವಾಹಿನಿ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳಿದ್ದರು.
ಅದರಂತೆ ಇಂದು ಅಂತಿಮ ದಿನದಲ್ಲಿ ಏನೆಲ್ಲಾ ಆಯ್ತು ಎಂಬ ತುಣುಕುಗಳ ಪ್ರಸಾರವಾಗಲಿದೆ. ಶೋ ಅರ್ಧಕ್ಕೇ ನಿಲ್ಲುತ್ತಿರುವುದು ಮತ್ತು ಕೊರೋನಾ ವಿಚಾರ ಸ್ಪರ್ಧಿಗಳಿಗೆ ತೀವ್ರ ಆಘಾತ ತಂದಿದೆ. ಇತ್ತ ವೀಕ್ಷಕರಿಗೂ ವಿನ್ನರ್ ಕಾಣದೇ ಈ ಸಂಚಿಕೆ ಮುಕ್ತಾಯವಾಗುತ್ತಿರುವುದು ಬೇಸರ ತಂದಿದೆ.