Select Your Language

Notifications

webdunia
webdunia
webdunia
webdunia

ಸರಿಗಮಪ ಗಾಯಕ ಸುಬ್ರಮಣಿ ಪತ್ನಿ ಸಾವಿಗೆ ಹೊಸ ತಿರುವು

ಗಾಯಕ ಸುಬ್ರಮಣಿ
ಬೆಂಗಳೂರು , ಬುಧವಾರ, 12 ಮೇ 2021 (08:56 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಪೊಲೀಸ್ ಅಧಿಕಾರಿ, ಗಾಯಕ ಸುಬ್ರಮಣಿ ಪತ್ನಿಯ ಸಾವಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ.


ಸುಬ್ರಮಣಿ ಪತ್ನಿ ಜ್ಯೋತಿ ಮೇ 10 ರಂದು ಕೊರೋನಾದಿಂದ ಸಾವನ್ನಪ್ಪಿದ್ದಾರೆಂದು ಸುದ್ದಿಯಾಗಿತ್ತು. ಆದರೆ ಅವರ ಸಾವಿಗೆ ಕೊರೋನಾ ಕಾರಣವಲ್ಲ. ಇದು ಆತ್ಮಹತ್ಯೆ ಎಂಬ ಸುದ್ದಿ ಕೇಳಿಬಂದಿದೆ.

ಎರಡು ದಿನಗಳ ಮೊದಲು ಜ್ಯೋತಿ ಕೌಟುಂಬಿಕ ಕಲಹದ ಕಾರಣದಿಂದ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಸಂಬಂಧಿಕರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಉಸಿರುಗಟ್ಟಿದ ಸ್ಥಿತಿಯಲ್ಲಿದ್ದ ಜ್ಯೋತಿಗೆ ಸೂಕ್ತ ಸಮಯದಲ್ಲಿ ವೆಂಟಿಲೇಟರ್ ಕೂಡಾ ಸಿಗದೇ ಸಾವನ್ನಪ್ಪಿದ್ದಾರೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸರಿಗಮಪ ಖ್ಯಾತಿಯ ಗಾಯಕ ಸುಬ್ರಹ್ಮಣ್ಯ ಪತ್ನಿ ಕೊರೋನಾದಿಂದ ಸಾವು