Select Your Language

Notifications

webdunia
webdunia
webdunia
webdunia

ಒಳ್ಳೆ ಹುಡುಗ ಪ್ರಥಮ್ ನನ್ನು ಹುಡ್ಕೊಂಡು ಬಿಗ್ ಬಾಸ್ ದಿವಾಕರ್ ಹೋಗಿದ್ಯಾಕೆ?

ಒಳ್ಳೆ ಹುಡುಗ ಪ್ರಥಮ್ ನನ್ನು ಹುಡ್ಕೊಂಡು ಬಿಗ್ ಬಾಸ್ ದಿವಾಕರ್ ಹೋಗಿದ್ಯಾಕೆ?
ಬೆಂಗಳೂರು , ಶುಕ್ರವಾರ, 23 ಮಾರ್ಚ್ 2018 (10:46 IST)
ಬೆಂಗಳೂರು: ಒಳ್ಳೆ ಹುಡುಗ ಪ್ರಥಮ್, ಬಿಗ್ ಬಾಸ್ ದಿವಾಕರ್. ಇಬ್ಬರಿಗೂ ಲೈಫ್ ಕೊಟ್ಟಿದ್ದು ಬಿಗ್ ಬಾಸ್ ಎಂಬ ರಿಯಾಲಿಟಿ ಶೋ. ಇಬ್ಬರೂ ಬೇರೆ ಬೇರೆ ಆವೃತ್ತಿಯ ಸ್ಪರ್ಧಿಗಳಾಗಿದ್ದರೂ ಸ್ನೇಹಕ್ಕೇನೂ ಕಡಿಮೆಯಾಗಿಲ್ಲ.

ಇದೀಗ ಬಿಗ್ ಬಾಸ್ 4 ವಿನ್ನರ್ ಪ್ರಥಮ್ ಮನೆಗೆ ಬಿಗ್ ಬಾಸ್ 5 ಸಂಚಿಕೆಯ ರನ್ನರ್ ಅಪ್ ದಿವಾಕರ್ ಹೋಗಿ ಭೇಟಿ ಮಾಡಿ ಬಂದಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ದಿವಾಕರ್ ಹೊಸದೊಂದು ಕಾರು ಕೊಂಡಿದ್ದರು.

ಅದೇ ಕಾರಿನಲ್ಲಿ ಪ್ರಥಮ್ ಮನೆಗೆ ಹೋದ ದಿವಾಕರ್ ಕಾರಿನಲ್ಲಿ ಕೂತು ಒಂದು ರೌಂಡ್ ಹೊಡೆಸಿದ್ದಾರಂತೆ. ಇಬ್ಬರೂ ಜ್ಯೂಸ್ ಕುಡಿದು ಅದೆಷ್ಟೋ ಹರಟಿದ್ದಾರಂತೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ದಿವಾಕರ್ ಗೆ ಈಗ ಸಾಕಷ್ಟು ಸಿನಿಮಾ, ಧಾರವಾಹಿ ಅವಕಾಶಗಳು ಬರುತ್ತಿವೆಯಂತೆ. ಇದನ್ನೆಲ್ಲಾ ಖುಷಿಯಿಂದಲೇ ಹೇಳಿಕೊಂಡರು ಎಂದು ಪ್ರಥಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

35 ನೇ ವರ್ಷದ ವೆಡ್ಡಿಂಗ್ ಡೇ ಆಚರಿಸಿದ್ರೂ ನವರಸನಾಯಕ ಜಗ್ಗೇಶ್ ಗೆ ಈ ಕೊರತೆ ಕಾಡಿತ್ತು!