Select Your Language

Notifications

webdunia
webdunia
webdunia
webdunia

ಬಿಗ್ ಬಾಸ್: ವಾಟ್ ಈಸ್ ಗಣರಾಜ್ಯ ಎಂದರು ಆಶಿತಾ!

ಬಿಗ್ ಬಾಸ್:  ವಾಟ್ ಈಸ್ ಗಣರಾಜ್ಯ ಎಂದರು ಆಶಿತಾ!
ಬೆಂಗಳೂರು , ಮಂಗಳವಾರ, 21 ನವೆಂಬರ್ 2017 (10:05 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರದ ಕ್ಯಾಪ್ಟನ್ ಆಯ್ಕೆ ಮಾಡಲು ಸ್ಪರ್ಧಿಗಳ ಸಾಮಾನ್ಯ ಜ್ಞಾನ ಪರೀಕ್ಷೆಗೊಳಪಡಿಸಲಾಗಿತ್ತು. ಆದರೆ ಆಶಿತಾಗೆ ಗಣರಾಜ್ಯ ದಿನ ಎಂದರೇನು ಎಂದೇ ಗೊತ್ತಾಗಲಿಲ್ಲ.
 

ಬಿಗ್ ಬಾಸ್ ಕೇಳಿದ ಪ್ರಶ್ನೆಗಳಿಗೆ ಸ್ಪರ್ಧಿಗಳು ಉತ್ತರ ಹೇಳಬೇಕಿತ್ತು. ಅತೀ ಹೆಚ್ಚು ಉತ್ತರ ಹೇಳಿದವರು ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗುತ್ತಾರೆ. ಅದರಂತೆ ನಿವೇದಿತಾ ಗೌಡ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾದರು.

ಚಟುವಟಿಕೆಯಲ್ಲಿ ಮೊದಲು ಭಾಗಿಯಾಗಿದ್ದು ನಟಿ ಆಶಿತಾ. ಇವರಿಗೆ ಭಾರತ ಗಣರಾಜ್ಯಗೊಂಡಿದ್ದು ಯಾವಾಗ ಎಂದು ಪ್ರಶ್ನೆ ಕೇಳಲಾಯಿತು. ಆದರೆ ಆಶಿತಾ ವಾಟ್ ಈಸ್ ಗಣರಾಜ್ಯ ಎಂದು ಪ್ರತಿ ಪ್ರಶ್ನೆ ಹಾಕಿದರು. ಅಷ್ಟೇ ಅಲ್ಲ ತಪ್ಪು ಉತ್ತರ ಹೇಳಿದರು. ಅಷ್ಟೇ ಅಲ್ಲ, ಬಾಹುಬಲಿ ಪ್ರತಿಮೆ ಎಲ್ಲಿದೆ ಎಂದರೆ ಬಾಹುಬಲಿ ಸಿನಿಮಾ ಶೂಟಿಂಗ್ ನಡೆದ ಸ್ಥಳದ ಹೆಸರು ಹೇಳಿದರು. ಅಸಲಿಗೆ, ಬಿಗ್ ಬಾಸ್ ಶ್ರವಣ ಬೆಳಗೊಳದ ಬಾಹುಬಲಿ ಮೂರ್ತಿ ಬಗ್ಗೆ ಪ್ರಶ್ನೆ ಕೇಳಿದ್ದರು!

ಇನ್ನು, ಕ್ರಿಕೆಟ್ ಪ್ರಿಯ ಜೆಕೆ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲು 10 ಸಾವಿರ ರನ್ ಪೂರೈಸಿದ ಕ್ರಿಕೆಟಿಗನ ಹೆಸರು ತಪ್ಪಾಗಿ ಹೇಳಿದ್ದಲ್ಲದೆ, ಹಾಲಿ ರಾಷ್ಟ್ರಪತಿ ಹೆಸರನ್ನೂ ತಪ್ಪಾಗಿ ಉಚ್ಚರಿಸಿ ಅವಕಾಶ ಕಳೆದುಕೊಂಡರು.  ಇನ್ನು ಶ್ರುತಿಗೆ ಭಾರತದ ಪ್ರಥಮ ಪ್ರಜೆ ಎಂದರೇ ಗೊತ್ತಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ದೀಪಿಕಾ ಪಡುಕೋಣೆ ಮನೆಗೆ ಬಿಗಿ ಭದ್ರತೆ