Webdunia - Bharat's app for daily news and videos

Install App

ಬಿಗ್ ಬಾಸ್ ಕನ್ನಡ 10: ಸ್ಪರ್ಧಿಗಳ ಮೇಲೆ ಕಿಚ್ಚ ಸುದೀಪ್ ಅಸಮಾಧಾನ

Webdunia
ಶನಿವಾರ, 18 ನವೆಂಬರ್ 2023 (17:03 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಯಾಕೋ ಸ್ಪರ್ಧಿಗಳ ವರ್ತನೆ, ಕೇಸು ಅಂತಲೇ ಸುದ್ದಿಯಾಗುತ್ತಿದೆ. ಈ ನಡುವೆ ಈ ವಾರ ಕಿಚ್ಚ ಸುದೀಪ್ ಸ್ಪರ್ಧಿಗಳ ಮೇಲೆ ಅಸಮಾಧಾನ ಬಹಿರಂಗವಾಗಿಯೇ ಹೊರಹಾಕಿದ್ದಾರೆ.

ಕಿಚ್ಚ ಸುದೀಪ್ ಸಾಮಾನ್ಯವಾಗಿ ಶನಿವಾರ ವಾರದ ಇಡೀ ಕತೆ ಮಾತನಾಡಿ ಭಾನುವಾರ ಒಬ್ಬ ಸ್ಪರ್ಧಿಯನ್ನು ಎಲಿಮಿನೇಟ್ ಆಗಿರುವುದಾಗಿ ಘೋಷಿಸುತ್ತಾರೆ. ಆದರೆ ಈ ವಾರ ಶನಿವಾರ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗುತ್ತಿದ್ದಾರೆ.

ಇದರ ನಡುವೆ ಆರಂಭದಿಂದಲೇ ಸುದೀಪ್ ಸ್ಪರ್ಧಿಗಳ ಜೊತೆ ಅಸಮಾಧಾನದಿಂದಲೇ ಮಾತನಾಡುತ್ತಿರುವ ಪ್ರೋಮೋ ಪ್ರಕಟವಾಗಿದೆ. ಹೀಗಾಗಿ ಮನೆಯ ಸದಸ್ಯರ ವರ್ತನೆಗಳು, ಇತ್ತೀಚೆಗಿನ ಕೆಲವು ವಿವಾದಗಳಿಂದ ಸುದೀಪ್ ಗೆ ಈ ಬಾರಿಯ ಬಿಗ್ ಬಾಸ್ ಸಾಕೆನ್ನಿಸಿದೆಯೇ ಎಂಬ ಅನುಮಾನ ಮೂಡಿದೆ.

ಇತ್ತೀಚೆಗಷ್ಟೇ ವರ್ತೂರು ಸಂತೋಷ್ ವಿರುದ್ಧ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದರು. ಅದರ ನಡುವೆ ಮಹಿಳಾ ಸ್ಪರ್ಧಿಗಳ ಬಗ್ಗೆ ಪುರುಷ ಸ್ಪರ್ಧಿಗಳು ಹೇಳಿದ್ದ ಕೆಲವೊಂದು ಶಬ್ಧಗಳು ಭಾರೀ ಟೀಕೆಗೊಳಗಾಗಿತ್ತು. ಇದರ ಬೆನ್ನಲ್ಲೇ ವರ್ತೂರು ಸಂತೋಷ್ ಮನೆಯಿಂದ ಹೊರಹೋಗುವುದಾಗಿ ಹಠ ಹಿಡಿದಿದ್ದರು. ಅದಾದ ಕೆಲವೇ ಸಮಯದಲ್ಲಿ ತನಿಷಾ ಕುಪ್ಪಂಡ ಭೋವಿ ಸಮುದಾಯಕ್ಕೆ ಅವಹೇಳನ ಮಾಡಿದ ಆರೋಪದಲ್ಲಿ ಕೇಸು ಜಡಿಸಿಕೊಂಡಿದ್ದಾರೆ. ಈ ಎಲ್ಲಾ ವಿವಾದಗಳು ಕಿಚ್ಚನ ತಾಳ್ಮೆಗೆಡಿಸಿವೆಯೇ ಎಂಬ ಅನುಮಾನ ಮೂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಕುಟುಂಬಕ್ಕೆ ಸುಪ್ರೀಂನಲ್ಲಿ ನ್ಯಾಯ ಸಿಗುವ ನಂಬಿಕೆಯಲ್ಲಿದ್ದೇನೆ: ನಟಿ ರಮ್ಯಾ

ಇದು ನನ್ನ ರಿಯಲ್ ಮುಖ: ಟ್ರೋಲ್‌ಗೆ ಬೇಸತ್ತು ಕೌಂಟರ್ ಕೊಟ್ಟ ಉರ್ಫಿ ಜಾವೇದ್‌

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನೋ ಟೆನ್ಷನ್ ಎಂದರಾ ವಿಜಯಲಕ್ಷ್ಮಿ ದರ್ಶನ್

ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌, ಪವಿತ್ರಾ ಗೌಡ ಸಂಬಂಧ ಬಗ್ಗೆ ವಕೀಲರು ಹೇಳಿದ್ದು ಹೀಗೆ

ನಿಮ್ಮಿಂದಲೇ ಆಗಿದ್ದು ಪವಿತ್ರಾ ಗೌಡ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ

ಮುಂದಿನ ಸುದ್ದಿ
Show comments