Webdunia - Bharat's app for daily news and videos

Install App

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

Webdunia
ಮಂಗಳವಾರ, 2 ಜನವರಿ 2024 (10:19 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಕೊನೆಯ ಹಂತಕ್ಕೆ ತಲುಪಿದ್ದು, ಈ ವಾರ ಮನೆಗೆ ಸ್ಪರ್ಧಿಗಳಿಗೆ ಹಿತವಚನ ನೀಡಲು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಆಗಮಿಸಿದ್ದಾರೆ.

ಮನೆಗೆ ಬಂದ ಅವರನ್ನು ಸ್ಪರ್ಧಿಗಳು ಕಾಲಿಗೆ ನಮಸ್ಕರಿಸುವ ಮೂಲಕ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ಮನೆಯಲ್ಲಿ ದೇವರ ಪೂಜೆ ಸಲ್ಲಿಸಿದ ಸ್ವಾಮೀಜಿಗಳು ಸ್ಪರ್ಧಿಗಳ ಭವಿಷ್ಯ ನುಡಿದಿದ್ದಾರೆ.

ವಿಶೇಷವಾಗಿ ಡ್ರೋಣ್ ಪ್ರತಾಪ್ ಅವರ ಭವಿಷ್ಯ ನುಡಿದಿರುವ ಸ್ವಾಮೀಜಿ ನಿನಗೆ ಕುಟುಂಬ ಜೀವನ ಆಗಿಬರಲ್ಲ ಎಂದು ಹೇಳಿ ಶಾಕ್ ನೀಡಿದ್ದಾರೆ. ‘ಹೀಗೆ ಹೇಳುವುದು ಕಠಿಣ ಎನಿಸಬಹುದು. ಆದರೆ ನೀನು ಕುಟುಂಬದಿಂದ ದೂರವಿರಬೇಕು. ಕುಟುಂಬ ಜೀವನ ಸರಿಬರಲ್ಲ. ದೂರ ಇದ್ದು ಧೂಪ ಆಗ್ತೀಯೋ ಹತ್ತಿರ ಇದ್ದು ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು’ ಎಂದು ಸ್ವಾಮೀಜಿಗಳು ಹೇಳಿದ್ದಾರೆ. ಅವರ ಮಾತು ಕೇಳಿ ಪ್ರತಾಪ್ ಗೂ ಶಾಕ್ ಆಗಿದೆ. ಇಷ್ಟು ದಿನ ಹೆತ್ತವರಿಂದ ದೂರವಿದ್ದ ಪ್ರತಾಪ್ ಈಗ ಕುಟುಂಬದೊಂದಿಗೆ ಒಂದಾಗುವ ಮನಸ್ಸು ಮಾಡಿದ್ದಾರೆ. ಅವರ ತಂದೆ-ತಾಯಿ ಕೂಡಾ ಇತ್ತೀಚೆಗೆ ಬಿಗ್ ಬಾಸ್ ಗೆ ಭೇಟಿ ನೀಡಿದ್ದರು. ಆದರೆ ಈ ಹೊತ್ತಿನಲ್ಲೇ ಸ್ವಾಮೀಜಿ ಭವಿಷ್ಯ ಶಾಕ್ ನೀಡಿದೆ.

ಇನ್ನು, ವರ್ತೂರು ಸಂತೋಷ್ ಗೆ ತೊಡೆಯಲ್ಲಿರುವ ಟ್ಯಾಟೂನಿಂದಲೇ ನಿನಗೆ ಜೀವನದಲ್ಲಿ ಕೆಟ್ಟದ್ದಾಗುತ್ತಿದೆ ಎಂದಿದ್ದಾರೆ. ಈ ಟ್ಯಾಟೂ ಹಾಕಿಸಿಕೊಂಡ ಮೇಲೆ ನಿನಗೆ ಕಷ್ಟ-ನಷ್ಟಗಳು ಶುರುವಾಗಿದ್ದು ಹೌದಲ್ವೇ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಸಂತೋಷ್ ಕೂಡಾ ಹೌದು ಎಂದಿದ್ದಾರೆ.

ಯಾವ್ಯಾವ ಸ್ಪರ್ಧಿ ಬಗ್ಗೆ ಸ್ವಾಮೀಜಿಗಳು ಯಾವ ರೀತಿಯ ಭವಿಷ್ಯ ನುಡಿದಿದ್ದಾರೆ ಎಂಬುದನ್ನು ತಿಳಿಯಲು ಇಂದಿನ ಬಿಗ್ ಬಾಸ್ ಎಪಿಸೋಡ್ ನೋಡಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಊಹಿಸಲಾಗದ್ದನ್ನು ಸಾಧಿಸಿದ ರಿಷಭ್‌ ಶೆಟ್ಟಿ: ಕಾಂತಾರ 1 ಸಿನಿಮಾವನ್ನು ಕೊಂಡಾಡಿದ ಜ್ಯೂ.ಎನ್‌ಟಿಆರ್‌, ಶಿವಣ್ಣ

ಕಾಂತಾರ ಚಾಪ್ಟರ್‌ 1ಗೆ ಪ್ರೇಕ್ಷಕರು ಫಿದಾ: ರಿಷಭ್‌ ಶೆಟ್ಟಿ ಅಪ್ಪಿಕೊಂಡು ಪತ್ನಿ ಪ್ರಗತಿ ಭಾವುಕ

ಹಾಡು ನಿಲ್ಲಿಸಿದ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಛನ್ನುಲಾಲ್ ಮಿಶ್ರಾ: ಮೋದಿ ಕಂಬನಿ

Kantara chapter 1: ಮೈ ರೋಮಾಂಚನಗೊಳಿಸುವ ಕಾಂತಾರ ಚಾಪ್ಟರ್ 1 ವಿಮರ್ಶೆ ಇಲ್ಲಿದೆ

BB Season 12: ಮೂರನೇ ದಿನ ಧನುಷ್ ವಿರುದ್ಧ ರೆಬಲ್ ಆದ ಅಶ್ವಿನಿ ಗೌಡಗೆ ನೆಟ್ಟಿಗರಿಂದ ಕ್ಲಾಸ್‌

ಮುಂದಿನ ಸುದ್ದಿ
Show comments