Publish Date: Wed, 12 Dec 2018 (10:22 IST)
Updated Date: Wed, 12 Dec 2018 (10:25 IST)
ಬೆಂಗಳೂರು: ಈಗಾಗಲೇ ಕನ್ನಡ ಕಿರುತೆರೆಯಲ್ಲಿ ಹಲವು ಸಿನಿಮಾ ಚಾನೆಲ್ ಗಳಿವೆ. ಅದಕ್ಕೆ ಮತ್ತೊಂದು ಸೇರ್ಪಡೆಯಾಗಿ ಸಿರಿಗನ್ನಡ ಎಂಬ ಹೊಸ ವಾಹಿನಿ ಬರಲಿದೆ.
ಉದಯ ಮೂವೀಸ್, ಕಲರ್ಸ್ ಕನ್ನಡ ಮೂವೀಸ್, ಪಬ್ಲಿಕ್ ಮೂವೀಸ್ ನಂತಹ ವಾಹಿನಿಯ ಸಾಲಿಗೆ ಈ ಚಾನೆಲ್ ಕೂಡಾ ಸೇರ್ಪಡೆಯಾಗಲಿದೆ. ಆದರೆ ಕೆಲವೊಂದು ಹೊಸ ಕಾರ್ಯಕ್ರಮಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ.
ಕೇವಲ ಸಿನಿಮಾ ಮಾತ್ರವಲ್ಲದೆ, ಸಿನಿಮಾ ನಟರ ಸಂದರ್ಶನಗಳು, ಅವರ ಅಡುಗೆ ಶೋ ಇತ್ಯಾದಿ ಕೆಲವು ಹೊಸ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ಸದ್ಯ ಉಚಿತವಾಗಿ ಪ್ರಸಾರವಾಗುತ್ತಿದ್ದು, ಚಾನೆಲ್ ಗಾಗಿ ನಿಮ್ಮ ಕೇಬಲ್ ಆಪರೇಟರ್ ಗಳನ್ನು ಸಂಪರ್ಕಿಸಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ