Select Your Language

Notifications

webdunia
webdunia
webdunia
webdunia

ಕಿರುತೆರೆಯ ಸೆನ್ಸೇಷನ್ ಜೊತೆ ಜೊತೆಯಲಿ ಆರ್ಯವರ್ಧನ್ ಗೆ ಇಂದು ಬರ್ತ್ ಡೇ ಸಂಭ್ರಮ

ಜೊತೆ ಜೊತೆಯಲಿ
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರವಾಹಿ ಮೂಲಕ ಕಿರುತೆರೆ ಲೋಕದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಆರ್ಯವರ್ಧನ್ ಅಲಿಯಾಸ್ ನಟ ಅನಿರುದ್ಧ್ ಗೆ ಇಂದು ಜನ್ಮದಿನದ ಸಂಭ್ರಮ.


ಬೆಳ್ಳಿ ತೆರೆಯಲ್ಲಿ ಹೇಳಿಕೊಳ್ಳುವಂತಹ ಬ್ರೇಕ್ ಸಿಗದೇ ಇದ್ದರೂ ಕಿರುತೆರೆಯಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಗೆ ಹೊಸ ಜನ್ಮವೇ ಸಿಕ್ಕಿತ್ತು. ಅವರ ನಟನೆಯನ್ನು ನೋಡಿದರೆ ವಿಷ್ಣು ದಾದ ನೆನಪಾಗುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ.

ಇಂತಿಪ್ಪ ಅನಿರುದ್ಧ್ ಗೆ ಇಂದು ಜನ್ಮದಿನದ ಸಂಭ್ರಮ. ಅನಿರುದ್ಧ್ ಜನ್ಮದಿನವನ್ನು ಜೊತೆ ಜೊತೆಯಲಿ ಧಾರವಾಹಿ ತಂಡ ಅದ್ಧೂರಿಯಾಗಿ ಆಚರಿಸಿದೆ. ಅಭಿಮಾನಿಗಳೂ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮೆಚ್ಚಿನ ಆರ್ಯವರ್ಧನ್ ಗೆ ಶುಭ ಹಾರೈಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾದಲ್ಲೂ ಬಿಡುಗಡೆಯಾಗಲಿದೆ ರಮೇಶ್ ಅರವಿಂದ್ ‘ಶಿವಾಜಿ ಸುರತ್ಕಲ್’