ಅಗ್ನಿಸಾಕ್ಷಿ ಸಿದ್ಧಾರ್ಥ್ ಕಮ್ ಬ್ಯಾಕ್! ಬೃಂದಾವನದಲ್ಲಿ ಗುಳಿಕೆನ್ನೆ ಹೀರೋ ವಿಜಯ್ ಸೂರ್ಯ

Krishnaveni K
ಸೋಮವಾರ, 15 ಏಪ್ರಿಲ್ 2024 (14:28 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಒಂದು ಕಾಲದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿ ಸಾಕ್ಷಿ ಧಾರವಾಹಿಯಲ್ಲಿ ಸಿದ್ಧಾರ್ಥ್ ಪಾತ್ರದ ಮೂಲಕ ಹೆಂಗಳೆಯರ ಮನ ಗೆದ್ದಿದ್ದ ನಟ ವಿಜಯ್ ಸೂರ್ಯ ಈಗ ಕಲರ್ಸ್ ವಾಹಿನಿಯ ಧಾರವಾಹಿಗೆ ಕಮ್ ಬ್ಯಾಕ್ ಮಾಡಿದ್ದಾರೆ.

ಅಗ್ನಿಸಾಕ್ಷಿ ಧಾರವಾಹಿಯ ಸಿದ್ಧಾರ್ಥ್-ಸನ್ನಿಧಿ ಜೋಡಿ ಎಂದರೆ ಎಲ್ಲರ ಹಾಟ್ ಫೇವರಿಟ್ ಆಗಿತ್ತು. ತೆರೆ ಮೇಲೆ ಇಬ್ಬರ ಕೆಮಿಸ್ಟ್ರಿ, ರೊಮ್ಯಾನ್ಸ್ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿತ್ತು. ನಿಜ ಜೀವನದಲ್ಲೂ ಜೋಡಿಯಾಗಿ ಎಂದು ಅನೇಕರು ಅವರಿಗೆ ಸಲಹೆ ನೀಡುತ್ತಿದ್ದುದು ಇದೆ.

ಈ ಧಾರವಾಹಿ ಬಳಿಕ ಸಿದ್ಧಾರ್ಥ್ ಪಾತ್ರ ಮಾಡುತ್ತಿದ್ದ ನಟ ವಿಜಯ್ ಸೂರ್ಯ ಸ್ಟಾರ್ ಸುವರ್ಣ ವಾಹಿನಿ, ತೆಲುಗು ಸ್ಟಾರ್ ಮಾ ವಾಹಿನಿಗಳ ಧಾರವಾಹಿಗಳು, ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇತ್ತ ಸನ್ನಿಧಿ ಪಾತ್ರ ಮಾಡುತ್ತಿದ್ದ ವೈಷ್ಣವಿ ಈಗ ಜೀ ಕನ್ನಡ ವಾಹಿನಿ ಸೀತಾರಾಮ ಧಾರವಾಹಿಗೆ ನಾಯಕಿಯಾಗಿ ಮಿಂಚುತ್ತಿದ್ದಾರೆ.

ಇದೀಗ ಸಿದ್ಧಾರ್ಥ್ ಕಲರ್ಸ್ ವಾಹಿನಿಗೆ ಕಮ್ ಬ್ಯಾಕ್ ಮಾಡಿದ್ದಾರೆ. ಯುಗಾದಿ ನಿಮಿತ್ತ ಕಲರ್ಸ್ ವಾಹಿನಿಯ ತನ್ನ ಜನಪ್ರಿಯ ಧಾರವಾಹಿಗಳ ವಿಶೇಷ ಸಂಚಿಕೆ ಪ್ರಸಾರ ಮಾಡುತ್ತಿದೆ. ಅದರಂತೆ ಬೃಂದಾವನ ಧಾರವಾಹಿಯ ವಿಶೇಷ ಸಂಚಿಕೆಯಲ್ಲಿ ನಾಯಕಿಯನ್ನು ಕಾಪಾಡಲು ಸಿದ್ಧಾರ್ಥ್ ಬರುತ್ತಿದ್ದಾನೆ. ವಿಶೇಷವೆಂದರೆ ಈ ಧಾರವಾಹಿಯಲ್ಲಿ ಈಗ ಅಮ್ಮಮ್ಮನ ಪಾತ್ರ ಮಾಡುತ್ತಿರುವ ನಟಿ ಚಿತ್ಕಲಾ ಬಿರಾದರ್ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸಿದ್ಧಾರ್ಥ್ ಅತ್ತೆ ಪಾತ್ರ ಮಾಡಿದ್ದರು. ಹೀಗಾಗಿ ಈ ಜೋಡಿಯನ್ನು ಮತ್ತೆ ತೆರೆ ಮೇಲೆ ಒಟ್ಟಿಗೇ ನೋಡಿದ ನೆಟ್ಟಿಗರು ನಮಗೆ ಅಗ್ನಿಸಾಕ್ಷಿ ಧಾರವಾಹಿ ನೆನಪಾಗುತ್ತಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮದುವೆ ಬಳಿಕ ಮೊದಲ ಬಾರೀ ಒಟ್ಟಿಗೆ ಕಾಣಿಸಿಕೊಂಡ ಸಮಂತಾ- ರಾಜ್‌ ನಿಡಿಮೋರು

ಕೇರಳ ರಾಜ್ಯ ಪ್ರಶಸ್ತಿ ಪುರಸ್ಕೃತ ಮಲಯಾಳಂ ನಟ ಅಖಿಲ್ ವಿಶ್ವನಾಥ್ ಅನುಮಾನಾಸ್ಪದ ಸಾವು

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಮೊದಲ ದಿನವೇ 30 ಕೋಟಿ ಗಳಿಸಿದ್ದು ನಿಜಾನಾ

ಹೇಮಾ ಮಾಲಿನಿ ಚುನಾವಣೆಗೆ ನಿಂತಿದ್ದಾಗ ಧರ್ಮೇಂದ್ರರಿಂದ ಕರೆ ಬಂದಿತ್ತು: ಅಮಿತ್ ಶಾ ನೆನಪು

ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಹೋದರ ದಿನಕರ್‌

ಮುಂದಿನ ಸುದ್ದಿ
Show comments