Select Your Language

Notifications

webdunia
webdunia
webdunia
webdunia

ಮಹಿಳಾ ವಿಶ್ವಕಪ್‌: ಮಂದಾನ, ಹರ್ಮನ್‌ ಆರ್ಭಟ: ಲಂಕಾ ವಿರುದ್ಧ ಭಾರತ ಸವಾರಿ

India Women's Cricket Team

Sampriya

ದುಬೈ , ಗುರುವಾರ, 10 ಅಕ್ಟೋಬರ್ 2024 (10:01 IST)
Photo Courtesy X
ದುಬೈ: ಸ್ಮೃತಿ ಮಂದಾನ (50 ರನ್‌) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (52 ರನ್‌) ಅವರ ಸ್ಪೋಟಕ ಅರ್ಧಶತಕದ ಬಲದಿಂದ ಭಾರತ ತಂಡ, ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಶ್ರೀಲಂಕಾ  ತಂಡವನ್ನು ಬಗ್ಗು ಬಡಿಯಿತು.

ಮೂರು ಪಂದ್ಯಗಳ ಪೈಕಿ ಸತತ ಎರಡರಲ್ಲಿ ಗೆದ್ದು ನಾಲ್ಕು ಅಂಕ ಗಳಿಸಿರುವ ಭಾರತ, ಎ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದ್ದು, ಸೆಮಿಫೈನಲ್‌ ಹಾದಿಯತ್ತ ಮುನ್ನುಗ್ಗಿದೆ. ಆಡಿರುವ ಎರಡೂ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ. ಲಂಕಾ ತಂಡ ಮೂರೂ ಪಂದ್ಯಗಳಲ್ಲಿ ಸೋತು ಕೊನೆಯ ಸ್ಥಾನದಲ್ಲಿದೆ.

ಟಾಸ್‌ ಗೆದ್ದು ಆಡಲು ನಿರ್ಧರಿಸಿದ ಭಾರತ ತಂಡ ಭಾರತ 3 ವಿಕೆಟ್‌ಗೆ 172 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಗುರಿಯನ್ನು ಬೆನ್ನತ್ತಿದ ಲಂಕಾ ತಂಡ ತಂಡ 19.5 ಓವರ್‌ಗಳಲ್ಲಿ 90 ಗಳಿಸಿ ಹೋರಾಟವನ್ನು ಮುಗಿಸಿತು.

ಭಾರತದ ಬೌಲರ್‌ಗಳಾದ ಅರುಂಧತಿ ರೆಡ್ಡಿ ಮತ್ತು ಆಶಾ ಸೋಭಾನ ತಲಾ ಮೂರು ವಿಕೆಟ್‌ ಪಡೆದರೆ, ರೇಣುಕಾ ಸಿಂಗ್‌ ಎರಡು ವಿಕೆಟ್‌ ಪಡೆದು ಮಿಂಚಿದರು. ಹರ್ಮನ್‌ಪ್ರೀತ್‌ ಕೌರ್‌ ಪಂದ್ಯದ ಆಟಗಾರ್ತಿಯಾಗಿ ಹೊರಹೊಮ್ಮಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೊ ಕಬಡ್ಡಿ ಲೀಗ್ ಜಾಹೀರಾತಿನಲ್ಲಿ ಕಿಚ್ಚ ಸುದೀಪ್, ಬೆಂಗಳೂರು ಬುಲ್ಡೋಜರ್ ಗೆ ಸಾಥ್