Select Your Language

Notifications

webdunia
webdunia
webdunia
webdunia

ಟ್ವೆಂಟಿ 20 ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ಟ್ವೆಂಟಿ 20 ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

Sampriya

ಬ್ರಿಜ್‌ಟೌನ್ , ಶನಿವಾರ, 29 ಜೂನ್ 2024 (19:44 IST)
Photo Courtesy X
ಬ್ರಿಜ್‌ಟೌನ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂದಿನ ಫೈನಲ್ ಪಂದ್ಯಾಟದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡ ಟ್ರೋಫಿಗಾಗಿ ಎರಡು ತಂಡಗಳು ಹೋರಾಟ ನಡೆಸಲಿದೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಐಸಿಸಿ ಟ್ವೆಂಟಿ 20 ವಿಶ್ವಕಪ್ ಟೂರ್ನಿಯಲ್ಲಿ ನಡೆದ ಪಂದ್ಯಾಟದಲ್ಲಿ ದಕ್ಷಿಣ ಆಫ್ರಿಕಾ ಎಲ್ಲ ಎಂಟು ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಪ್ರವೇಶಿಸಿದರೆ, ಭಾರತ  ಏಳು ಪಂದ್ಯಗಳಲ್ಲಿ ಜಯ ಗಳಿಸಿ ಫೈನಲ್‌ಗೆ ಲಗ್ಗೆಯಿಟ್ಟು, ಇದೀಗ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ಭಾರಿ ಟಿ20 ವಿಶ್ವಕಪ್ ಗೆಲ್ಲುವ ಗುರಿ ಹೊಂದಿರುವ ತಂಡ ಭಾರೀ ಪ್ರಾಕ್ಟೀಸ್‌ನೊಂದಿಗೆ ಗ್ರೌಂಡ್‌ಗೆ ಇಳಿದಿದೆ.  ಇನ್ನೂ   ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿದ್ದು, ಚೊಚ್ಚಲ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ.

ಈ ವಿಶ್ವಕಪ್ ಬಳಿಕ ಕೋಚ್ ರಾಹುಲ್ ದ್ರಾವಿಡ್ ಅವರ  ಅವಧಿ ಮುಕ್ತಾಯವಾಗಲಿದ್ದು, ತಂಡದ ಆಟಗಾರರು ಈ ಬಾರಿ ದ್ರಾವಿಡ್ ಅವರಿಗಾಗಿ ವಿಶ್ವಕಪ್ ಗೆಲ್ಲುವ ಕನಸನ್ನು ಇಟ್ಟುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

T20 World Cup 2024: ವ್ಯಂಗ್ಯದ ಪೋಸ್ಟ್ ಮಾಡಿ ಕೊಹ್ಲಿ ಭಯಕ್ಕೆ ಡಿಲೀಟ್ ಮಾಡಿಬಿಟ್ಟರಾ ಸ್ಟುವರ್ಟ್ ಬ್ರಾಡ್