Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್‌ ಟೂರ್ನಿಗೆ ದಿನಗಣನೆ: ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡಕ್ಕೆ ಅಗ್ರಸ್ಥಾನ

Virat Kohli

sampriya

ದುಬೈ , ಗುರುವಾರ, 30 ಮೇ 2024 (15:07 IST)
Photo By Instagram
ದುಬೈ: ಟಿ20 ವಿಶ್ವಕಪ್‌ಗೆ ಇನ್ನು ಮೂರು ದಿನ ಇರುವಂತೆ ಐಸಿಸಿ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆಯಾಗಿದ್ದು, ಭಾರತ ತಂಡವು ಅಗ್ರಸ್ಥಾನದಲ್ಲಿ ಮುಂದುವರಿದಿದೆ. ವೆಸ್ಟ್‌ ಇಂಡೀಸ್‌ ತಂಡವು ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.

2007ರಲ್ಲಿ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡವು 264 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 2021ರ ಚಾಂಪಿಯನ್ ಆಸ್ಟ್ರೇಲಿಯಾ 257 ಅಂಕಗಳೊಂದಿಗೆ ಎರಡನೇ ಸ್ಥಾನ ಅಲಂಕರಿಸಿದ್ದಾರೆ.

ಹಾಲಿ ಚಾಂಪಿಯನ್ ಇಂಗ್ಲೆಂಡ್ 254 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ವಿಂಡೀಸ್ 252 ಪಾಯಿಂಟ್ಸ್​ಗಳೊಂದಿಗೆ 4ನೇ ಸ್ಥಾನ ಪಡೆದಿದೆ. ನ್ಯೂಜಿಲೆಂಡ್ 250 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ವಿರುದ್ಧ ಸರಣಿ ಗೆದ್ದ ವೆಸ್ಟ್ ಇಂಡೀಸ್ 4ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಇದು ಟಿ20 ವಿಶ್ವಕಪ್​​ಗೂ ಮುನ್ನ ವೆಸ್ಟ್ ಇಂಡೀಸ್‌ ವಿಶ್ವಾಸ ಹೆಚ್ಚಿಸಿದೆ. 2012 ಮತ್ತು 2016ರ ಟಿ20 ವಿಶ್ವಕಪ್​ ಗೆದ್ದ ವಿಂಡೀಸ್‌ ಎರಡು ಸ್ಥಾನ ಮೇಲೇರಿ 4ನೇ ಸ್ಥಾನದಲ್ಲಿದೆ.

ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಎರಡೂ 244 ಅಂಕಗಳೊಂದಿಗೆ 6 ಮತ್ತು 7ನೇ ಸ್ಥಾನ ಪಡೆದಿವೆ. ಜೂನ್ 2ರಂದು ಟಿ20 ವಿಶ್ವಕಪ್​​ನ ತಮ್ಮ ಆರಂಭಿಕ ಪಂದ್ಯದಲ್ಲಿ ಗಯಾನಾದಲ್ಲಿ ಪಪುವಾ ನ್ಯೂಗಿನಿಯಾ ವಿರುದ್ಧ ವೆಸ್ಟ್ ಇಂಡೀಸ್ ಸೆಣಸಾಟ ನಡೆಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀನು ಮಾಡಿದ್ದು ಕ್ಯಾಪ್ಟನ್ ಆಗಿ ನಾನೇ ನೋಡಿಲ್ಲ: ಕುಲದೀಪ್ ಯಾದವ್ ಕಾಲೆಳೆದ ರೋಹಿತ್ ಶರ್ಮಾ