Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್‌: ಅಮೆರಿಕಕ್ಕೆ ಐತಿಹಾಸಿಕ ಗೆಲುವು, ಪಾಕಿಸ್ತಾನಕ್ಕೆ ಆಘಾತ

t20world cup

sampriya

ಅಮೆರಿಕ , ಶುಕ್ರವಾರ, 7 ಜೂನ್ 2024 (15:46 IST)
Photo By X
ಅಮೆರಿಕ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್‌ ಶಿಶು ಆತಿಥೇಯ ಅಮೆರಿಕ ಸೂಪರ್ ಓವರ್‌ನಲ್ಲಿ ಬಲಿಷ್ಠ ಪಾಕಿಸ್ತಾನ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದೆ.  

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಏಳು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. ನಾಯಕ ಬಾಬರ್ ಆಜಂ 44 ಹಾಗೂ ಶದಾಬ್ ಖಾನ್ 40 ರನ್ ಗಳಿಸಿದರು.

ಗುರಿ ಬೆನ್ನಟ್ಟಿದ ಅಮೆರಿಕ ನಾಯಕ ಮೊನಾಂಕ್ ಪಟೇಲ್ ಅರ್ಧಶತಕದ ಬಲದಿಂದ ಮೂರು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಆ್ಯಂಡ್ರಿಸ್ ಗೌಸ್ (35) ಹಾಗೂ ಆ್ಯರನ್ ಜೋನ್ಸ್ (36*) ಉಪಯುಕ್ತ ಕಾಣಿಕೆ ನೀಡಿದರು. ಅಮೆರಿಕ ತಂಡದಲ್ಲಿರುವ ಚಿಕ್ಕಮಗಳೂರಿನ ನಾಸ್ತುಷ್ ಕೆಂಜಿಗೆ ಮೂರು ವಿಕೆಟ್‌ ಪಡೆದು ಮಿಂಚಿದರು.  

ಕೊನೆಯ ಓವರ್‌ನಲ್ಲಿ ಅಮೆರಿಕದ ಗೆಲುವಿಗೆ 15 ರನ್ ಬೇಕಿತ್ತು. ಆದರೆ 'ಟೈ' ಆಗಿದ್ದರಿಂದ ಪಂದ್ಯ ವಿಜೇತರನ್ನು ಸೂಪರ್ ಓವರ್‌ನಲ್ಲಿ ನಿರ್ಧರಿಸಲಾಯಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಮೆರಿಕ ಒಂದು ವಿಕೆಟ್‌ ನಷ್ಟಕ್ಕೆ 18 ರನ್ ಗಳಿಸಿತು. ಇದಕ್ಕುತ್ತರವಾಗಿ ಪಾಕಿಸ್ತಾನ 13 ರನ್‌ ಗಳಿಸಲಷ್ಟೇ ಗಳಿಸಿ ಸೋಲುಪ್ಪಿಕೊಂಡಿತು.

ಪಾಕಿಸ್ತಾನ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ ಗೆಲುವು ದಾಖಲಿಸಿರುವ ಅಮೆರಿಕ ಇತಿಹಾಸ ನಿರ್ಮಿಸಿದೆ. ಮತ್ತೊಂದೆಡೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸದಸ್ಯ ರಾಷ್ಟ್ರದೊಂದಿಗೆ ಪಾಕ್‌ಗೆ ಎದುರಾದ ಮೊದಲ ಸೋಲು ಇದಾಗಿದೆ. ವಿಶ್ವಕಪ್‌ಗೂ ಮುನ್ನ ಬಾಂಗ್ಲಾದೇಶ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಎರಡು ಪಂದ್ಯ ಗೆದ್ದಿದ್ದ ಅಮೆರಿಕ ಸರಣಿ ವಶಪಡಿಸಿಕೊಂಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಇದು ಯಾವ ಸೀಮೆ ಪಿಚ್ ಕಣ್ರೀ… ಟೀಂ ಇಂಡಿಯಾ ಇಂಥಾ ಪಿಚ್ ನಲ್ಲಿ ಆಡೋದಾ