Publish Date: Thu, 06 Jun 2024 (09:59 IST)
Updated Date: Thu, 06 Jun 2024 (10:04 IST)
ನ್ಯೂಯಾರ್ಕ್: ಟಿ20 ವಿಶ್ವಕಪ್ ನಲ್ಲಿ ಐರ್ಲೆಂಡ್ ವಿರುದ್ಧ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಈಗ ಮಾಜಿ ನಾಯಕ ಧೋನಿ ದಾಖಲೆಯೊಂದನ್ನು ಮುರಿದಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ಭಾರತದ ವೇಗಿಗಳ ದಾಳಿಗೆ ತತ್ತರಿಸಿ 96 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿದ ಭಾರತ 2 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿ 8 ವಿಕೆಟ್ ಗಳ ಗೆಲುವು ದಾಖಲಿಸಿತು.
ಈ ಗೆಲುವಿನೊಂದಿಗೆ ಟಿ20 ಕ್ರಿಕೆಟ್ ನಲ್ಲಿ ರೋಹಿತ್ ಯಶಸ್ವೀ ನಾಯಕ ಎಂಬ ದಾಖಲೆ ಮಾಡಿದರು. ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ 55 ಟಿ20 ಪಂದ್ಯಗಳಿಂದ 42 ಗೆಲುವು ಸಂಪಾದಿಸಿತು. ಇದರೊಂದಿಗೆ ಭಾರತದ ಪರ ನಾಯಕರಾಗಿ ಗರಿಷ್ಠ ಪಂದ್ಯಗಳಲ್ಲಿ ಗೆಲುವು ಗಳಿಸಿಕೊಟ್ಟ ದಾಖಲೆ ರೋಹಿತ್ ರದ್ದಾಯಿತು.
ಇದಕ್ಕೆ ಮೊದಲು ಧೋನಿ 72 ಪಂದ್ಯಗಳಿಂದ ನಾಯಕರಾಗಿ 41 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಇದೀಗ ರೋಹಿತ್ ಆ ದಾಖಲೆಯನ್ನು ಮುರಿದಿದ್ದಾರೆ. ಅದೂ ಧೋನಿಗಿಂತಲೂ ಕಡಿಮೆ ಪಂದ್ಯಗಳಿಂದ ಎನ್ನವುದು ಇನ್ನೊಂದು ವಿಶೇಷ.