ರುಚಿಕರವಾದ ಹಲ್ವಾ ಮಾಡಿ ಸವಿಯಿರಿ

Webdunia
ಗುರುವಾರ, 1 ಡಿಸೆಂಬರ್ 2022 (13:58 IST)
ಬೇಗನೆ ಸಿಹಿ ಮಾಡುವುದು ಗೃಹಿಣಿಯರಿಗೆ ಸವಾಲು. ಇಂತಹ ಸಮಯದಲ್ಲಿ ಫಟಾಫಟ್ ಅಂತ ಮಾಡಬಹುದು ಈ ಕಸ್ಟರ್ಡ್ ಪೌಡರ್ ಹಲ್ವಾ.

ಕಸ್ಟರ್ಡ್ ಪೌಡರ್, ಸಕ್ಕರೆ, ತುಪ್ಪದಿಂದ ತಯಾರಿಸಲಾಗುವ ಸಿಹಿಯನ್ನು ಮಾಡುವುದು ಹೇಗೆಂದು ಕಲಿತುಕೊಳ್ಳಿ. ಕಸ್ಟರ್ಡ್ ಪೌಡರ್ ಹಲ್ವಾ ಮಾಡುವ ಸುಲಭ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು

ಸಕ್ಕರೆ – 1 ಕಪ್
ಕಸ್ಟರ್ಡ್ ಪೌಡರ್ – ಅರ್ಧ ಕಪ್ (ನಿಮ್ಮ ಆಯ್ಕೆಯ ಯಾವ ಫ್ಲೇವರ್ ಕೂಡಾ ಬಳಸಬಹುದು)
ನೀರು – 1 ಕಪ್
ತುಪ್ಪ – 2 ಟೀಸ್ಪೂನ್
ಕೇಸರಿ ದ್ರಾವಣ – 1 ಟೀಸ್ಪೂನ್
ಕತ್ತರಿಸಿದ ಗೋಡಂಬಿ

ಮಾಡುವ ವಿಧಾನ

* ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಸಕ್ಕರೆ ಮತ್ತು ಕಸ್ಟರ್ಡ್ ಪೌಡರ್ ತೆಗೆದುಕೊಳ್ಳಿ.
* ಅದಕ್ಕೆ 1 ಕಪ್ ನೀರಿನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
* ಸಕ್ಕರೆ ಸಂಪೂರ್ಣವಾಗಿ ಕರಗಿ, ಯಾವುದೇ ಉಂಡೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಪಕ್ಕಕ್ಕೆ ಇರಿಸಿ.
* ಈಗ ಒಂದು ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಗೊಂಡಂಬಿಯನ್ನು ಹುರಿಯಿರಿ.
* ಈಗ ಸಕ್ಕರೆ ಹಾಗೂ ಕಸ್ಟರ್ಡ್ ಪೌಡರ್ನ ಮಿಶ್ರಣವನ್ನು ಸುರಿದು, ಮಧ್ಯಮ ಉರಿಯಲ್ಲಿ ಮಿಶ್ರಣ ಮಾಡಿ.
* ಈಗ ಅದಕ್ಕೆ ಕೇಸರಿ ದ್ರಾವಣವನ್ನು ಹಾಕಿ, ಮಿಶ್ರಣ ದಪ್ಪವಾಗುವವರೆಗೆ ನಿರಂತರವಾಗಿ ಮಿಕ್ಸ್ ಮಾಡಿ.
* ಈಗ ಟ್ರೇ ಅಥವಾ ಬಟ್ಟಲಿಗೆ ತುಪ್ಪವನ್ನು ಗ್ರೀಸ್ ಮಾಡಿ, ಅದಕ್ಕೆ ಮಿಶ್ರಣವನ್ನು ಸುರಿಯಿರಿ.
* ಅದನ್ನು ತಣ್ಣಗಾಗಲು 30 ನಿಮಿಷಗಳವರೆಗೆ ಬಿಡಿ.
* ಇದೀಗ ಕಸ್ಟರ್ಡ್ ಪೌಡರ್ ಹಲ್ವಾ ತಯಾರಾಗಿದ್ದು, ಗೋಡಂಬಿಯಿಂದ ಅಲಂಕರಿಸಿ, ಸವಿಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ಮುಂದಿನ ಸುದ್ದಿ
Show comments