Select Your Language

Notifications

webdunia
webdunia
webdunia
webdunia

ರುಚಿಕರವಾದ ಕ್ಯಾರೆಟ್ ಹಲ್ವಾ ಮಾಡುವುದು ಹೇಗೆ ಗೊತ್ತಾ

ರುಚಿಕರವಾದ ಕ್ಯಾರೆಟ್ ಹಲ್ವಾ ಮಾಡುವುದು ಹೇಗೆ ಗೊತ್ತಾ
ಮಂಗಳೂರು , ಶನಿವಾರ, 3 ಸೆಪ್ಟಂಬರ್ 2022 (12:59 IST)
ಕ್ಯಾರೆಟ್ ನಮ್ಮ ಆರೋಗ್ಯಕ್ಕೆ ಮತ್ತು ತ್ವಚೆಗೆ ತುಂಬಾ ಒಳ್ಳೆಯದು. ಕ್ಯಾರೆಟ್ ಜ್ಯೂಸ್ ಮತ್ತು ಹಸಿ ಕ್ಯಾರೆಟ್ ಅನ್ನು ಜನರು ತುಂಬಾ ಇಷ್ಟಪಟ್ಟು ಕುಡಿತ್ತಾರೆ ಮತ್ತು ತಿನ್ನುತ್ತಾರೆ.

ಅದರಂತೆ ನಿಮಗೆ ಜನಪ್ರಿಯಾವಾದ ʼಕ್ಯಾರೆಟ್ ಹಲ್ವಾʼ ಮಾಡುವ ಸೂಪರ್ ವಿಧಾನವನ್ನು ಹೇಳಿಕೊಡುತ್ತಿದ್ದೇವೆ.

ಈ ರೆಸಿಪಿಯನ್ನು ನೀವು ನಿಮ್ಮ ಮನೆಯಲ್ಲಿ ಟ್ರೈ ಮಾಡಿರುತ್ತಿರಾ ಆದರೆ ಇಂದು ನಾವು ಹೇಳಿಕೊಡುವ ರೀತಿ ಮಾಡಿದ್ರೆ ನಿಮಗೆ ಇನ್ನೂ ಹೆಚ್ಚು ಇಷ್ಟವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಬೇಕಾಗಿರುವ ಪದಾರ್ಥಗಳು

* ಕ್ಯಾರೆಟ್ – 1 ಕೆಜಿ
* ತುಪ್ಪ – ಅರ್ಧ ಕಪ್
* ಕಟ್ ಮಾಡಿದ ಗೋಡಂಬಿ – 10
* ಕಟ್ ಮಾಡಿದ ಬಾದಾಮಿ – 10

* ಹಾಲು – 3 ಕಪ್
* ಸಕ್ಕರೆ – ಅರ್ಧ ಕಪ್
* ಖೋವಾ – 2 ಟೀಸ್ಪೂನ್
* ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
* ಒಣ ದ್ರಾಕ್ಷಿ – 2 ಟೀಸ್ಪೂನ್

ಮಾಡುವ ವಿಧಾನ

* ಮೊದಲನೆಯದಾಗಿ, ಕ್ಯಾರೆಟ್ ಸಿಪ್ಪೆ ತೆಗೆದು ನುಣ್ಣಗೆ ತುರಿಯಿರಿ. ಪಕ್ಕಕ್ಕೆ ಇರಿಸಿ.
* ದೊಡ್ಡ ಬಾಣಲೆಯಲ್ಲಿ ಕಡಿಮೆ ಶಾಖದಲ್ಲಿ ಅರ್ಧ ಕಪ್ ತುಪ್ಪ ಮತ್ತು ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿಯನ್ನು ಗೋಲ್ಡನ್ ಬ್ರೌನ್ ಬರುವವರೆಗೂ ಫ್ರೈ ಮಾಡಿ. ಪಕ್ಕಕ್ಕೆ ಇರಿಸಿ.

* ಅದೇ ಬಾಣಲಿಯಲ್ಲಿ ಕ್ಯಾರೆಟ್ ಸೇರಿಸಿ ಚೆನ್ನಾಗಿ 5 ನಿಮಿಷಗಳ ಕಾಲ ಫ್ರೈ ಮಾಡಿ
* ಈಗ 3 ಕಪ್ ಹಾಲು ಸುರಿಯಿರಿ ಮತ್ತು ಚೆನ್ನಾಗಿ ಬೆರೆಸಿ. 10 ನಿಮಿಷಗಳ ಕಾಲ ಕುದಿಸಿ. ಕ್ಯಾರೆಟ್ ಚೆನ್ನಾಗಿ ಬೇಯಿಸಿ ಹಾಲು ಕಡಿಮೆಯಾಗುವವರೆಗೆ ಕುದಿಸಿ.

* ಹಾಲು ಸಂಪೂರ್ಣವಾಗಿ ಕಡಿಮೆಯಾದ ಮೇಲೆ ಸಕ್ಕರೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸಕ್ಕರೆ ಕರಗುವವರೆಗೆ ಬೇಯಿಸಿ.
* ಅದಕ್ಕೆ ಕೋವಾ ಹಾಕಿ ಹುರಿಯಿರಿ ನಂತರ ಗ್ಯಾಸ್ ಆಫ್ ಮಾಡಿ ಏಲಕ್ಕಿ ಪುಡಿ ಮತ್ತು ಗೋಡಂಬಿ, ಬಾದಾಮಿಯಿಂದ ಅಲಂಕಾರಿಸಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಸಿಹಿ ಪ್ರಿಯರಿರು ಮನೆಯಲ್ಲೇ ಮಾಡಿ ಗುಲಾಬ್ ಜಾಮೂನ್