Select Your Language

Notifications

webdunia
webdunia
webdunia
webdunia

ವರಮಹಾಲಕ್ಷ್ಮಿ ಹಬ್ಬದ ವಿಶೇಷ ‘ಹೋಳಿಗೆ’ ಒಮ್ಮೆ ಟ್ರೈ ಮಾಡಿ

ವರಮಹಾಲಕ್ಷ್ಮಿ ಹಬ್ಬದ ವಿಶೇಷ ‘ಹೋಳಿಗೆ’ ಒಮ್ಮೆ ಟ್ರೈ ಮಾಡಿ
ಬೆಂಗಳೂರು , ಶುಕ್ರವಾರ, 5 ಆಗಸ್ಟ್ 2022 (09:18 IST)
ಎಲ್ಲರೂ ಇಷ್ಟಪಟ್ಟು ತಿನ್ನುವ ಸಿಹಿ ತಿಂಡಿಯಲ್ಲಿ ಹೋಳಿಗೆ ಆಗ್ರಸ್ಥಾನದಲ್ಲಿದೆ. ಅದರಲ್ಲಿಯೂ ಈ ವರಮಹಾಲಕ್ಷ್ಮಿ ಹಬ್ಬದಲ್ಲಿ ‘ಹೋಳಿಗೆ’ ವಿಶೇಷ ರೆಸಿಪಿಯಾಗಿರುತ್ತೆ.

ಅದಕ್ಕೆ ಇಂದು ನೀವು ಸುಲಭವಾಗಿ ಮತ್ತು ಬೇಗ ಹೇಗೆ ‘ಹೋಳಿಗೆ’ ಮಾಡಬಹುದು ಎಂದು ಹೇಳಿಕೊಡುತ್ತೇವೆ.

ಬೇಕಾಗಿರುವ ಪದಾರ್ಥಗಳು

* ಮೈದಾ – 1 ಕಪ್
* ಕಡ್ಲೆ ಬೇಳೆ – 1 ಕಪ್
* ಅರಿಶಿನ – 2 ಟೀಸ್ಪೂನ್
* ಉಪ್ಪು – 1 ಟೀಸ್ಪೂನ್

* ನೀರು – ಅರ್ಧ ಕಪ್
* ಎಣ್ಣೆ – ಅರ್ಧ ಕಪ್
* ಬೆಲ್ಲ – 1 ಕಪ್
* ಏಲಕ್ಕಿ ಪುಡಿ / ಎಲಾಚಿ ಪು – 1 ಟೀಸ್ಪೂನ್
* ಬೇಕಾಗಿರುವಷ್ಟು ತುಪ್ಪ

ಮಾಡುವ ವಿಧಾನ

* ಮೊದಲನೆಯದಾಗಿ, ದೊಡ್ಡ ಮಿಕ್ಸಿಂಗ್ ಬೌಲ್ನಲ್ಲಿ 1 ಕಪ್ ಮೈದಾ, 1 ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ ಹಿಟ್ಟನ್ನು ತಯಾರಿಸಿ.
* ಹಿಟ್ಟಿಗೆ ಹೆಚ್ಚು ಎಣ್ಣೆಯನ್ನು ಹಾಕಿ ಮೃದುವಾಗಿ ಕಲಸಿ. ಕನಿಷ್ಠ 3 ಗಂಟೆಗಳ ಕಾಲ ಮುಚ್ಚಿ ಇಡಿ.
* ಪ್ರೆಶರ್ ಕುಕ್ಕರ್ನಲ್ಲಿ ಕಡ್ಲೆ ಬೇಳೆ, 1 ಕಪ್ ನೀರು ,1 ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ 2 ಸೀಟಿಗಳಿಗೆ ಬೇಯಿಸಿರಿ.
* 10 ನಿಮಿಷಗಳ ಕಾಲ ಹಾಗೆ ಇಡಿ, ಇದರಿಂದ ನೀರನ್ನು ಹೊರಹಾಕಿ. ಅದಕ್ಕೆ 1 ಕಪ್ ಬೆಲ್ಲವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲ ಕರಗುವ ತನಕ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಬೇಯಿಸಿ.

* ಹೆಚ್ಚುವರಿಯಾಗಿ 1 ಟೀಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ, 5 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ.
* ಈ ಮಿಶ್ರಣವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಹೆಚ್ಚು ನುಣ್ಣಗೆ ರುಬ್ಬಿಕೊಳ್ಳಬೇಡಿ. ಇಲ್ಲಿಗೆ ನಿಮ್ಮ ಹೋಳಿಗೆ ಮಿಶ್ರಣ ರೆಡಿ.
* ಹಿಟ್ಟಿನ ಮಿಶ್ರಣವನ್ನು ಸಣ್ಣ ಚೆಂಡಿನ ಗಾತ್ರ ಮಾಡಿ ಅದನ್ನು ಚಪ್ಪಟೆಯಾಕಾರದಲ್ಲಿ ತಟ್ಟಿ ನಂತರ ಹೋಳಿಗೆ ಮಿಶ್ರಣವನ್ನು ಮಧ್ಯದಲ್ಲಿ ಇಟ್ಟು ಜೋಳದ ರೊಟ್ಟಿಯಂತೆ ತಟ್ಟಿ.
* ಇತ್ತ ಮೊದಲೇ ಗ್ಯಾಸ್ ಆನ್ ಮಾಡಿಟ್ಟುಕೊಂಡು ಹೋಳಿಗೆ ತಟ್ಟಿದ ತಕ್ಷಣ ತವಾದ ಮೇಲೆ ಹಾಕಿ ಬೇಯಿಸಿ. ಅದರ ಮೇಲೆ ತುಪ್ಪ ಹಾಕಿ.
* ಎರಡು ಬದಿಯು ಚೆನ್ನಾಗಿ ಬೇಯಿಸಿ.
– ಅಂತಿಮವಾಗಿ, ತುಪ್ಪ / ತೆಂಗಿನ ಹಾಲು / ಮಾವಿನ ರಸಾಯನದೊಂದಿಗೆ ಹೋಳಿಗೆ / ಒಬ್ಬಟ್ಟು ಬಡಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ವರಲಕ್ಷ್ಮಿ ವ್ರತ ಮಾಡುವುದು ಹೇಗೆ – ಏಕೆ?