Publish Date: Thu, 19 Aug 2021 (09:40 IST)
Updated Date: Thu, 19 Aug 2021 (09:49 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ವೈಟ್ ಲಿಫ್ಟರ್ ಮೀರಾಬಾಯಿ ಚಾನು ತಮಗೆ ಆರಂಭದ ದಿನಗಳಲ್ಲಿ ಲಿಫ್ಟ್ ಕೊಟ್ಟು ಸಹಾಯ ಮಾಡಿದ ಟ್ರಕ್ ಡ್ರೈವರ್ ಗಳನ್ನು ಹುಡುಕಿ ಸನ್ಮಾನಿಸಿದ್ದರು.
ಇದಕ್ಕೆ ಪ್ರಧಾನಿ ಮೋದಿ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಮೊನ್ನೆ ಪ್ರಧಾನಿ ನಿವಾಸದಲ್ಲಿ ಎಲ್ಲಾ ಒಲಿಂಪಿಕ್ ಹೀರೋಗಳಿಗೆ ಪ್ರಧಾನಿ ಔತಣ ಕೂಟ ಏರ್ಪಡಿಸಿದ್ದರು. ಈ ವೇಳೆ ಮೀರಾಬಾಯಿ ಕೆಲಸವನ್ನು ಪ್ರಧಾನಿ ವಿಶೇಷವಾಗಿ ಕೊಂಡಾಡಿದ್ದಾರೆ.
ಒಳ್ಳೆಯ ಮನಸ್ಸಿರುವವರಿಗೆ ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ. ನಿಮ್ಮ ಈ ಕೆಲಸ ಎಷ್ಟೋ ಜನರಿಗೆ ಪ್ರೇರಣೆಯಾಗಲಿದೆ ಎಂದು ಪ್ರಧಾನಿ ಕೊಂಡಾಡಿದ್ದಾರೆ.