ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಆರಂಭದ ದಿನಗಳಿಂದಲೂ ಮೈದಾನದಲ್ಲಿ ಆಕ್ರಮಣಕಾರಿ ವರ್ತನೆಯಿಂದಲೇ ಸುದ್ದಿಯಾಗಿದ್ದವರು.
ಅವರು ಮೊದಲ ಬಾರಿಗೆ 2011-12 ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದಾಗ ಮೂದಲಿಸುತ್ತಿದ್ದ ಪ್ರೇಕ್ಷಕರ ಕಡೆಗೆ ನಡು ಬೆರಳು ತೋರಿ ಅಶ್ಲೀಲ ಸನ್ನೆ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಆ ಸಂದರ್ಭದಲ್ಲಿ ಕೊಹ್ಲಿಯ ವಿರುದ್ಧ ಮ್ಯಾಚ್ ರೆಫರಿ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಈ ಘಟನೆಯನ್ನು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಆಗ ಮ್ಯಾಚ್ ರೆಫರಿ ಕೊಠಡಿಗೆ ಕರೆದೊಯ್ದು ನಿನ್ನೆ ಬೌಂಡರಿ ಲೈನ್ ಬಳಿ ಏನಾಯ್ತು ಎಂದು ಕೇಳಿದರು. ನಾನು ಏನೂ ಆಗಲೇ ಇಲ್ಲವೆಂಬಂತೆ ನಟಿಸಿದೆ. ಆದರೆ ರೆಫರಿ ಕೆಲವು ಪತ್ರಿಕೆಗಳನ್ನು ನನ್ನ ಎದುರು ಇಟ್ಟು ಪ್ರಶ್ನೆ ಮಾಡಿದರು. ನಾನು ತಪ್ಪಿಸಿಕೊಳ‍್ಳಲು ಸಾಧ್ಯವಿರಲಿಲ್ಲ. ಕೊನೆಗೆ ದಯವಿಟ್ಟು ನನ್ನ ಬ್ಯಾನ್ ಮಾಡಬೇಡಿ ಎಂದು ಅಂಗಲಾಚಿದೆ ಎಂದು ಕೊಹ್ಲಿ ಹಳೆಯ ಘಟನೆಯನ್ನು ಮೆಲುಕು ಹಾಕಿದ್ದಾರೆ.