Publish Date: Sun, 01 Aug 2021 (09:20 IST)
Updated Date: Sun, 01 Aug 2021 (09:27 IST)
ಟೋಕಿಯೋ: ಭಾರತದ ಬಾಕ್ಸಿಂಗ್ ತಾರೆ ಸತೀಶ್ ಕುಮಾರ್ ಇಂದು ಕ್ವಾರ್ಟರ್ ಫೈನಲ್ ಪಂದ್ಯವಾಡಲಿದ್ದು, ಇದಕ್ಕೂ ಮೊದಲು ಅವರಿಗೆ ಗಾಯದ ಆತಂಕ ಕಾಡಿತ್ತು.
ಸತೀಶ್ ಕಳೆದ ಪಂದ್ಯವಾಡುವಾಗ ಗಾಯಕ್ಕೀಡಾಗಿದ್ದು, ಏಳು ಸ್ಟಿಚಸ್ ಹಾಕಲಾಗಿತ್ತು. ಹೀಗಾಗಿ ಅವರು ಕ್ವಾರ್ಟರ್ ಫೈನಲ್ ನಲ್ಲಿ ಆಡುವುದು ಅನುಮಾನ ಎನ್ನಲಾಗಿತ್ತು.
ಆದರೆ ಇದೀಗ ವೈದ್ಯಕೀಯ ತಂಡ ಅವರು ಆಡಲು ಫಿಟ್ ಎಂದು ಘೋಷಣೆ ಮಾಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಅವರು ಆಡುವುದು ಖಚಿತವಾಗಿದೆ.