Publish Date: Thu, 05 Aug 2021 (16:57 IST)
Updated Date: Thu, 05 Aug 2021 (16:59 IST)
ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕನಿಷ್ಠ ಕಂಚಿನ ಪದಕವಾದರೂ ಗೆಲ್ಲುವ ಭಾರತದ ಕುಸ್ತಿಪಟು ವಿನೇಶ್ ಪೋಗಟ್ ಕನಸು ಭಗ್ನವಾಗಿದೆ.
ಒಂದು ಸೆಮಿಫೈನಲ್ ನಲ್ಲಿ ಬೆಲಾರಸ್ ನ ವನೇಸಾ ಗೆದ್ದಿದ್ದರೆ ವಿನೇಶ್ ಗೆ ಕಂಚಿನ ಪದಕಕ್ಕಾಗಿ ಮತ್ತೊಂದು ಪಂದ್ಯವಾಡುವ ಅವಕಾಶವಿತ್ತು. ಆದರೆ ವಿನೇಶ್ ಕ್ವಾರ್ಟರ್ ಫೈನಲ್ ಎದುರಾಳಿಯಾಗಿದ್ದ ವನೇಸಾ ಸೆಮಿಫೈನಲ್ ನಲ್ಲಿ ಸೋಲುವುದರೊಂದಿಗೆ ಈ ಅವಕಾಶ ತಪ್ಪಿದೆ.
ಇದರೊಂದಿಗೆ ಭಾರೀ ನಿರೀಕ್ಷೆ ಹೊಂದಿದ್ದ ಭಾರತದ ಮಹಿಳಾ ಕುಸ್ತಿಪಟುವಿನ ಟೋಕಿಯೋ ಒಲಿಂಪಿಕ್ ಪ್ರಯಾಣ ಮುಕ್ತಾಯವಾಗಿದೆ.