ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕ್ರೀಡಾಪಟುವಾಗಬೇಕೆಂಬ ಮಹಿಳೆ ಎದುರಿಸುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ.
ತಾವು ಚಿಕ್ಕವಯಸ್ಸಿನಲ್ಲಿ ಟೆನಿಸ್ ಆಟಗಾರ್ತಿಯಾಗಬೇಕೆಂದು ಹೊರಟಿದ್ದಾಗ ತಮ್ಮ ಬಂಧುಗಳೇ ಆಡಿದ್ದ ಮಾತುಗಳನ್ನು ಅವರು ಸ್ಮರಿಸಿಕೊಂಡಿದ್ದು, ಭಾರತದಲ್ಲಿ ಕ್ರೀಡಾಪಟುವಾಗಬೇಕೆಂದು ಹಂಬಲಿಸುವ ಮಹಿಳೆ ಎದುರಿಸುವ ಟೀಕೆ-ಟಿಪ್ಪಣಿಗಳ ಕುರಿತು ಮಾತನಾಡಿದ್ದಾರೆ.
ತಾನು ಚಿಕ್ಕ ವಯಸ್ಸಿನಲ್ಲಿ ಟೆನಿಸ್ ರಾಕೆಟ್ ಹಿಡಿಯಲು ಹೊರಟಾಗ ನೀನು ಟೆನಿಸ್ ಆಡಿದರೆ ಕಪ್ಪಗಾಗುತ್ತೀಯಾ. ಆಮೇಲೆ ನಿನ್ನ ಯಾರೂ ಮದುವೆಯಾಗಲ್ಲ ಎಂದು ಹೆದರಿಸುತ್ತಿದ್ದರು ಎಂದು ಸಾನಿಯಾ ಹೇಳಿದ್ದಾರೆ. ಹೆಣ್ಣು ಮಕ್ಕಳು, ಬಿಳಿಯಾಗಿರಲೇ ಬೇಕು, ಚೆನ್ನಾಗಿರಬೇಕು ಎಂಬ ಸಂಸ್ಕೃತಿ ಬದಲಾಗಬೇಕು ಎಂದು ಸಾನಿಯಾ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.