ಲಂಡನ್: ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಲ್ಲಿ ಈಗ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪುತ್ರ ಇಝಾನ್ ನದ್ದೇ ಹವಾ!
ಅಮ್ಮ ಅಂಕಣದಲ್ಲಿ ಎದುರಾಳಿ ಜೊತೆ ಸೆಣಸಾಡುವಾಗ ಗ್ಯಾಲರಿಯಲ್ಲಿ ಕೂತು ಚಿಯರ್ ಮಾಡುವ ಇಝಾನ್ ಪಂದ್ಯ ಮುಗಿದ ಬಳಿಕ ಪ್ರೇಕ್ಷಕರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.
ರೋಹನ್ ಬೋಪಣ್ಣ ಜೊತೆಗೆ ಸಾನಿಯಾ ಮಿಕ್ಸೆಡ್ ಡಬಲ್ಸ್ ಆಡಿ ಗೆದ್ದ ಬಳಿಕ ಮಗನನ್ನೂ ಅಂಗಣಕ್ಕೆ ಎತ್ತಿಕೊಂಡು ಬಂದು ತಮಗೆ ಚಿಯರ್ ಮಾಡಿದ ಪ್ರೇಕ್ಷಕರಿಗೆಲ್ಲಾ ಧನ್ಯವಾದ ಸಲ್ಲಿಸಿದ್ದಾರೆ. ಈ ವೇಳೆ ಅಮ್ಮ ಸಾನಿಯಾ ಹೇಳಿಕೊಟ್ಟಂತೆ ರೋಹನ್ ಬೋಪಣ್ಣಗೆ ಹೈ ಫೈ ಕೊಟ್ಟ ಇಝಾನ್, ಪ್ರೇಕ್ಷಕರತ್ತ ಕೈ ಬೀಸುತ್ತಿದ್ದಂತೇ ಭಾರೀ ಹರ್ಷೋದ್ಘಾರ ಕೇಳಿಬಂದಿದೆ. ಅಂತೂ ಅಮ್ಮನ ಜೊತೆಗೆ ಇಝಾನ್ ಕೂಡಾ ತಾರಾಕರ್ಷಣೆಯಾಗಿದ್ದಾನೆ.