Publish Date: Mon, 02 Jun 2025 (15:31 IST)
Updated Date: Mon, 02 Jun 2025 (15:34 IST)
ಬೆಂಗಳೂರು: ಭಾರತದ ಹಾಲಿ ವಿಶ್ವ ಚಾಂಪಿಯನ್ ಡಿ ಗುಕೇಶ್ ಅವರು ವಿಶ್ವದ ನಂ. 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ಅವರಿಗೆ ಸೋಲುಣಿಸಿ ಅಮೋಘ ಸಾಧನೆ ಮಾಡಿದ್ದಾರೆ.
"ಅತ್ಯಂತ ನೋವಿನ" ಸೋಲನ್ನು ಅನುಭವಿಸಿದ ನಂತರ ಕಾರ್ಲ್‌ಸನ್ ತಾಳ್ಮೆ ಕಳೆದುಕೊಂಡ ಹಾಗೆ ಕಾಣಿಸಿಕೊಂಡಿದ್ದಾರೆ.
ಸೋಲು ಅನುಭವಿಸುತ್ತಿದ್ದ ಹಾಗೇ ಗೋಚರಿಸುವ ಹತಾಶೆ ಮತ್ತು ಕೋಪದಲ್ಲಿ ಟೇಬಲ್ ಅನ್ನು ಪಂಚ್ ಮಾಡಿದರು. ಆ ಮೂಲಕ 19ರ ಹರೆಯದ ಗುಕೇಶ್ 8.5 ಅಂಕಗಳನ್ನು ಕಲೆ ಹಾಕಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.
ಮೇಜಿಗೆ ಬಲವಾಗಿ ಗುದ್ದಿದ ಕಾರ್ಲ್‌ಸನ್ ತಮ್ಮ ಸೋಲಿನ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಬಳಿಕ ತಮ್ಮ ವರ್ತನೆಗಾಗಿ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಗುಕೇಶ್ ಬಳಿ ಮರಳಿದ ಕಾರ್ಲ್‌ಸನ್, ಅವರ ಬೆನ್ನು ತಟ್ಟಿದರು.
ಈ ಎಲ್ಲ ಘಟನೆಗಳ ನಡುವೆ ಅತೀಮ ಸಂಯಮವನ್ನು ಕಾಪಾಡಿದ ಗುಕೇಶ್, ಚೆಸ್ ಲೋಕದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.