ಆಸ್ಟಾನಾ(ಕಜಕಸ್ತಾನ): ಐದು ಬಾರಿ ವಿಶ್ವ ಚಾಂಪಿಯನ್ ಎಂ.ಸಿ ಮೇರಿ ಕಾಮ್ ಅವರ ಎರಡನೇ ಬಾರಿಗೆ ಒಲಿಂಪಿಕ್ ಪ್ರವೇಶಿಸುವ ಕನಸಿಗೆ ಶನಿವಾರ ತೆರೆಬಿದ್ದಿದೆ. ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನಲ್ಲಿ ಮೇರಿ ಕಾಂ ಜರ್ಮನಿಯ ಅಜೀಜೆ ನಿಮಾನಿ ವಿರುದ್ಧ 0-2ರಿಂದ ಸೋಲಪ್ಪಿದ್ದಾರೆ.
ಮೇರಿ ಕಾಂ(51 ಕೆಜಿ ವಿಭಾಗ) 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆಯಾಗಿದ್ದರು. ರಿಯೋ ಒಲಿಂಪಿಕ್ಸ್‌ಗೆ ವಿಶ್ವ ಚಾಂಪಿಯನ್‌ಷಿಪ್ ಸೆಮಿ ಫೈನಲ್‌ಗೆ ಪ್ರವೇಶ ಪಡೆದವರು ಮಾತ್ರ ಭಾಗವಹಿಸಲು ಅವಕಾಶವಿದೆ.
ಮೇರಿ ಕಾಮ್ ಮೊದಲಿಗೆ ಆಕ್ರಮಣಕಾರಿಯಾಗಿ ಆಟ ಆರಂಭಿಸಿದರೂ ನಿಮಾನಿ ಮೇರಿ ಕಾಂಗೆ ಸ್ವಲ್ಪ ಅಂತರದಲ್ಲಿ ಹೋರಾಟ ಮಾಡಿದರು. ಆರಂಭದ ಎರಡು ನಿಮಿಷದಲ್ಲಿ ನಿಮಾನಿ ಯಾವುದೇ ದಾಳಿ ಮಾಡದಿದ್ದರೂ, ಕೆಲವು ಪ್ರತಿ ಪೆಟ್ಟುಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದರು. 2ನೇ ಸುತ್ತಿನಲ್ಲಿ ಮೇರಿ ಕಾಂ ಆಕ್ರಮಣಕಾರಿ ಆಡವಾಡಿದರೂ, ತೀರ್ಪುಗಾರರು ನಿಮಾನಿ ಗೆಲುವನ್ನು ಘೋಷಿಸಿದರು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.