Select Your Language

Notifications

webdunia
webdunia
webdunia
webdunia

ಪ್ರತಿಯೊಬ್ಬ ಕ್ರೀಡಾಪಟು ಸೂಪರ್ ಸ್ಟಾರ್ ಇದ್ದಂತೆ: ಸಲ್ಮಾನ್ ಖಾನ್

ಪ್ರತಿಯೊಬ್ಬ ಕ್ರೀಡಾಪಟು ಸೂಪರ್ ಸ್ಟಾರ್ ಇದ್ದಂತೆ: ಸಲ್ಮಾನ್ ಖಾನ್
ಮುಂಬೈ , ಗುರುವಾರ, 5 ಮೇ 2016 (13:40 IST)
ಬಾಲಿವುಡ್‌ನ ನಟ ಸಲ್ಮಾನ್ ಖಾನ್ ಗುಡ್‌ವಿಲ್ ಅಂಬಾಸಿಡರ್ ಆಗಿರೋದು ನಿಮಗೆಲ್ಲಾ ಗೊತ್ತು. ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುತ್ತಿರುವ ಪ್ರತಿಯೊಬ್ಬ ಕ್ರೀಡಾಪಟು ಸೂಪರ್ ಸ್ಟಾರ್‌ಗಳಿದ್ದಂತೆ ಎಂದು ಸಲ್ಮಾನ್ ಹೇಳಿದ್ದಾರೆ. 'ಇಂಡಿಯನ್ ಒಲಿಂಪಿಕ್ ಟೀಮ್ ಸೂಪರ್ ಸ್ಟಾರ್' ಎಂದು ಹೊಗಳಿದ್ದಾರೆ ಸಲ್ಲು..
ಇನ್ನೂ ಇದೇ ವೇಳೆ ಮಾತನಾಡುತ್ತಿದ್ದ ಅವರು, ನಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಹಾಗೂ ಚೀರ್ ಎಲ್ಲರಿಗೂ ತಲುಪಲಿದೆ. ಅಥ್ಲೆಟಿಗಳಿಗೆ ನೀವೂ ಕೂಡ ಪ್ರೋತ್ಸಾಹ ನೀಡಿ ಎಂದು ತಿಳಿಸಿದ್ದಾರೆ ಸಲ್ಮಾನ್.. 
 
ಈ ಬಗ್ಗೆ ಸಲ್ಮಾನ್ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಅವರೆಲ್ಲ ನಾಲ್ಕು ವರ್ಷದಿಂದ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಆದರೆ ಕೆಲ ಸೆಕೆಂಡ್‌ಗಳು ಪ್ರಸ್ತುಪಡಿಸುವುದು ಮಹತ್ತರ ಎಂದು ತಿಳಿಸಿದ್ದಾರೆ. 
 
ಇನ್ನೂ ಸಲ್ಮಾನ್ ಖಾನ್ ಅಂಬಾಸಿಡರ್ ಆಗಿರುವುದರ ಕುರಿತು ಸಲ್ಮಾನ್ ‌ರನ್ನು ಕೈ ಬಿಡುವಂತೆ ಹಲವರು ಒತ್ತಾಯಿಸಿದ್ದರು. ಅಲ್ಲದೇ ಶೂಟರ್ ಅಭಿನವ ಬಿಂದ್ರಾ ಹಾಗೂ ಸಚಿನ್ ತೆಂಡೂಲ್ಕರ್ ರಿಯೊ ಒಲಿಂಪಿಕ್ಸ್‌ನ ರಾಯಬಾರಿಯಾಗಿ ಆಯ್ಕೆಯಾಗಿದ್ದಾರೆ. ಸಲ್ಮಾನ್ ಜತೆಗೆ ಕೈ ಜೋಡಿಸಿದ್ದಾರೆ. ಇನ್ನೂ  ಅಗಸ್ಟ್ 5ರಿಂದ ಅಗಸ್ಟ್ 21ರವರೆಗೂ ರಿಯೊ ಒಲಿಂಪಿಕ್ಸ್ ಪಂದ್ಯಗಳು ನಡೆಯಲಿವೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಶಾರೂಖ್ ನನ್ನ ನೆಚ್ಚಿನ ನಟ: ರಾಮಗೋಪಾಲ ವರ್ಮಾ