ಡೆಲ್ಲಿ ಡೇರ್ ಡೆವಿಲ್ಸ್ ತಂಡವು ಜಹೀರ್ ಖಾನ್ ನಾಯಕತ್ವದಲ್ಲಿ ಮನೋಜ್ಞ ಪ್ರದರ್ಶನ ನೀಡಿದೆ. ಪಾಯಿಂಟ್ ಪಟ್ಟಿಯಲ್ಲಿ ಟಾಪ್‌ನಲ್ಲಿರುವ ಸನ್ ರೈಸರ್ಸ್ ವಿರುದ್ಧ ಗೆಲುವು ಗಳಿಸುವ ಮೂಲಕ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಕ್ವಿಂಟನ್ ಡಿ ಕಾಕ್, ಸಂಜು ಸಾಮ್ಸನ್ ಮುಂತಾದ ಬ್ಯಾಟಿಂಗ್ ಬಲದಿಂದ ಕೂಡಿದ್ದರೆ, ಜಹೀರ್ ಖಾನ್, ಬ್ರಾತ್‌ವೈಟ್ ಅಮಿತ್ ಮಿಶ್ರಾ, ಶಮಿ ಮುಂತಾದವರ ಬೌಲಿಂಗ್ ಬಲದಿಂದ ಕೂಡಿದೆ. ಡುಮಿನಿ, ಕ್ರಿಸ್ ಮಾರಿಸ್, ಪವನ್ ನೇಗಿ ಆಲ್‌ರೌಂಡ್ ಆಟಗಾರರು
ಪಾಯಿಂಟ್ ಪಟ್ಟಿಯಲ್ಲಿ ಪ್ರಸಕ್ತ ಸ್ಥಾನ: 6
ಆಡಿದ ಪಂದ್ಯಗಳು-13
ಗಳಿಸಿದ ಪಾಯಿಂಟ್‌ಗಳು-14
ಮುಂದಿನ ಪಂದ್ಯ: ರಾಯಲ್ ಚಾಲೆಂಜರ್ಸ್ ವಿರುದ್ಧ (ಮೇ 22)
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಜಯಗಳಿಸುವ ಮೂಲಕ ತನ್ನ ಪ್ಲೇಆಫ್ ಆಸೆಯನ್ನು ಡೆಲ್ಲಿ ಡೇರ್ ಡೆವಿಲ್ಸ್ ಜೀವಂತವಾಗಿರಿಸಿದೆ. ಆರ್‌ಸಿಬಿ ವಿರುದ್ಧ ಕೊನೆಯ ಪಂದ್ಯವಾಡಲಿರುವ ಡೆಲ್ಲಿಗೆ ಕೆಲವು ತಂಡಗಳ ಪಂದ್ಯ ಫಲಿತಾಂಶಗಳು ಅದಕ್ಕೆ ಸಕಾತಾತ್ಮಕವಾಗಿ ಬರಬೇಕಾಗಿದೆ.
ಗುಜರಾತ್ ಲಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಬೇಕೆಂದು ಡಿಡಿ ಆಶಿಸುತ್ತದೆ. ಸನ್ ರೈಸರ್ಸ್ ನೈಟ್ ರೈಡರ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದರೆ ಡಿಡಿಗೆ ಚೇತರಿಕೆ ನೀಡುತ್ತದೆ. ಡಿಡಿ ಪ್ಲೇ ಆಫ್ ಹಂತ ಪ್ರವೇಶಿಸಲು ಸರಳ ಗೆಲವು ಸಾಕಾಗಿದೆ. ಆದರೆ ಡಿಡಿ ಸೋಲಪ್ಪಿದರೆ ಮಾತ್ರ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಲಯನ್ಸ್ ಮತ್ತು ಸನ್ ರೈಸರ್ಸ್ ವಿರುದ್ಧ ಕೆಕೆಆರ್ ಹೆಚ್ಚಿನ ಅಂತರದಲ್ಲಿ ಗೆಲ್ಲಬೇಕಾಗುತ್ತದೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.