ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ ನಾಯಕತ್ವದಲ್ಲಿ ಉತ್ತಮ ಬ್ಯಾಟಿಂಗ್ ಶಕ್ತಿಯನ್ನು ಹೊಂದಿದೆ. ಪೋಲಾರ್ಡ್, ಹರ್ಭಜನ್ ಸಿಂಗ್, ಹಾರ್ದಿಕ್ ಪಾಂಡ್ಯಾ, ಕ್ರುನಾಲ್ ಪಾಂಡ್ಯ ಮುಂತಾದ ಆಲ್‌ರೌಂಡರ್‌ಗಳ ಪಡೆ ಮುಂಬೈಗೆ ಬಲ ತುಂಬಿದೆ. ಆದರೆ ಈ ಬಾರಿಯ ಆವೃತ್ತಿಯಲ್ಲಿ ಮುಂಬೈ ಆಟ ನಿರಾಶಾದಾಯಕವಾಗಿದೆ.
ಪಾಯಿಂಟ್ ಪಟ್ಟಿಯಲ್ಲಿ ಪ್ರಸಕ್ತ ಸ್ಥಾನ: 5
ಆಡಿದ ಪಂದ್ಯಗಳು: 13
ಗಳಿಸಿದ ಪಾಯಿಂಟ್‌ಗಳು: 14
ಮುಂದಿನ ಪಂದ್ಯ: ಗುಜರಾತ್ ಲಯನ್ಸ್( ಮೇ 21, ಕಾನ್ಪುರ)
ಡೇರ್ ಡೆವಿಲ್ಸ್ ಸನ್ ರೈಸರ್ಸ್ ಮೇಲೆ ರೋಚಕ ಜಯದೊಂದಿಗೆ ಮುಂಬೈ ಇಂಡಿಯನ್ಸ್ ಕೊನೆಯ ಪಂದ್ಯ ಅತೀ ಮುಖ್ಯವೆನಿಸಿದೆ. ಗುಜರಾತ್ ಲಯನ್ಸ್ ವಿರುದ್ಧ ಸೋತರೆ ಅವರು ಪ್ಲೇಆಫ್‌ನಿಂದ ಹೊರಬಿದ್ದಹಾಗಾಗುತ್ತದೆ. ಅವರು ಗೆದ್ದರೆ, ಸನ್ ರೈಸರ್ಸ್ ಹೈದರಾಬಾದ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗೆಲ್ಲಬೇಕಾಗುತ್ತದೆ ಮತ್ತು ಆರ್‌ಸಿಬಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಗೆಲ್ಲಬೇಕಾಗುತ್ತದೆ. ಆಗ ಮಾತ್ರ ಅದರ ಪ್ಲೇಆಫ್ ಆಸೆ ಫಲಿಸುತ್ತದೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.