ಕೋಲ್ಕತಾ ನೈಟ್ ರೈಡರ್ಸ್ ಗೌತಮ್ ಗಂಭೀರ್ ನಾಯಕತ್ವದಲ್ಲಿ ಉತ್ತಮ ಬೌಲಿಂಗ್ ಶಕ್ತಿಯನ್ನು ಹೊಂದಿದೆ. ಸುನಿಲ್ ನಾರಾಯಣ್, ಬ್ರಾಡ್ ಹಾಗ್, ಉಮೇಶ್ ಯಾದವ್ ಮುಂತಾದವರ ಬೌಲಿಂಗ್ ಶಕ್ತಿ ಮತ್ತು ಗೌತಮ್ ಗಂಭೀರ್, ಯುಸುಫ್ ಪಠಾಣ್, ರಸೆಲ್, ರಾಬಿನ್ ಉತ್ತಪ್ಪಾ, ಮನೀಶ್ ಪಾಂಡೆಯ ಬ್ಯಾಟಿಂಗ್ ಶಕ್ತಿಯನ್ನು ಹೊಂದಿದೆ.
ಪಟ್ಟಿಯಲ್ಲಿ ಪ್ರಸಕ್ತ ಸ್ಥಾನ: 4, ಆಡಿರುವ ಪಂದ್ಯಗಳು 13, ಗಳಿಸಿರುವ ಪಾಯಿಂಟ್ 14.
ಮುಂದಿನ ಪಂದ್ಯ: ಸನ್‌ರೈರ್ಸ್ ಹೈದರಾಬಾದ್( ಮೇ 22, ಎಡನ್ ಗಾರ್ಡನ್ಸ್)
ಸನ್ ರೈಸರ್ಸ್ ವಿರುದ್ಧ ಡೇರ್ ಡೆವಿಲ್ಸ್ ಗೆದ್ದಿದ್ದರಿಂದ ಕೆಕೆಆರ್ ಮೇಲಿನ ಒತ್ತಡ ಹೆಚ್ಚಿದೆ. ಕೆಕೆಆರ್ ಪ್ಲೇಆಫ್‌ಗೆ ಅರ್ಹತೆ ಗಳಿಸಬೇಕಾದರೆ, ಕೆಲವು ಫಲಿತಾಂಶಗಳನ್ನು ಆಧರಿಸಿದೆ. ಗುಜರಾತ್ ಲಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವುದರಿಂದ ನೈಟ್ ರೈಡರ್ಸ್ ಅವಕಾಶ ಹೆಚ್ಚಲಿದೆ.
ಅವರು ಸನ್ ರೈಸರ್ಸ್ ವಿರುದ್ಧ ಗೆದ್ದರೂ , ಆರ್‌ಸಿಬಿಯು ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ಸೋಲಿಸಬೇಕೆಂಬುದು ಅದರ ನಿರೀಕ್ಷೆಯಾಗಿದೆ. ಡೆಲ್ಲಿ ಡೇರ್ ಡೆವಿಲ್ಸ್ ಗೆದ್ದರೆ, ಭಾರೀ ಅಂತರದಿಂದ ಗೆಲ್ಲಬಾರದೆಂದು ಅದು ನಿರೀಕ್ಷಿಸುತ್ತದೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.