ಗೌತಮ್ ಗಂಬೀರ್ ಹೆಸರಿಗೆ ತಕ್ಕಂತೆ ತುಂಬಾ ಗಂಭೀರ ವ್ಯಕ್ತಿ. ಅವರ ಗಂಭೀರತೆ ಆಟಗಳಲ್ಲಿ ಕಂಡುಬರುತ್ತದೆ. ಆದಾಗ್ಯೂ ಗಂಭೀರ್ ''ವಾಟ್ ದಿ ಡಕ್'' ಚಾಟ್ ಶೋನಲ್ಲಿ ತಮ್ಮ ಕೋಪಕ್ಕೆ ಬಲಿಪಶುವಾಗುವುದು ತಮ್ಮ ಟೂತ್‌ಬ್ರಷ್ ಎಂದು ಹೇಳಿದ್ದು, ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ.
ಗಂಬೀರ್ ಮೈದಾನದಲ್ಲಿ ಕೆಲವೊಮ್ಮೆ ಎದುರಾಳಿ ಆಟಗಾರರ ಮೇಲೆ ಕೋಪತಾಪ ಪ್ರದರ್ಶಿಸಿದ್ದಾರೆ. ಆದರೆ ಸದಾಕಾಲ ಆಟಗಾರರ ಮೇಲೆ ಕೋಪತಾಪ ಪ್ರದರ್ಶನ ಸಾಧ್ಯವೇ, ಅದರಿಂದಾಗಿ ಹಲ್ಲುಜ್ಜುವ ಬ್ರಷ್ ಮೇಲೆ ತಮ್ಮ ಕೋಪವನ್ನು ಅವರು ತೋರಿಸುತ್ತಾರೆ.
ನಾಯಕತ್ವ ವಹಿಸುವುದು ಶ್ರಮದ ಕೆಲಸವಾಗಿದ್ದು, ಕಠಿಣ ಹಂತದಲ್ಲಿದ್ದಾಗ ನಮ್ಮ ಹತಾಶೆಯನ್ನು ಯಾರ ಮೇಲೂ ತೋರಿಸಲು ಸಾಧ್ಯವಿಲ್ಲ. ನಮ್ಮ ಟೀಮ್ ಮೇಟ್‌ಗಳ ಮೇಲೆ ಮತ್ತು ಪತ್ನಿ ಮೇಲೆ ತೋರಿಸಲು ಸಾಧ್ಯವಿಲ್ಲ. ಆಗ ಉಳಿದಿರುವುದು ಟೂತ್ ಬ್ರಷ್ ಮಾತ್ರ ಎಂದು ಗಂಭೀರ್ ಹೇಳಿದ್ದಾರೆ.
ನೈಟ್ ರೈಡರ್ಸ್ ಪ್ಲೇಆಫ್ ಹಂತ ಪ್ರವೇಶಿಸಲು ಕೊನೆಯ ಪಂದ್ಯದಲ್ಲಿ ಜಯ ಸಾಧಿಸಬೇಕಾಗಿದೆ. ಆದರೆ ರಸೆಲ್ ಅನುಪಸ್ಥಿತಿಯು ಗಂಭೀರ್ ಮನಸ್ಸಿನಲ್ಲಿ ಕೊರೆಯುತ್ತಿದೆ. ಹೀಗಾಗಿ ಟೂತ್ ಬ್ರಷ್ ಸ್ಥಿತಿ ಅಷ್ಟೊಂದು ಹಿತಕರವಾಗಿಲ್ಲವೆಂದು ಕಾಣುತ್ತದೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.