Select Your Language

Notifications

webdunia
webdunia
webdunia
webdunia

ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಪ್ಲೇಆಫ್ ಅವಕಾಶ ಹೇಗಿದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಪ್ಲೇಆಫ್ ಅವಕಾಶ ಹೇಗಿದೆ?
ಬೆಂಗಳೂರು , ಶನಿವಾರ, 21 ಮೇ 2016 (13:22 IST)
ರಾಯಲ್ ಚಾಲೆಂಜರ್ಸ್ ಉತ್ತಮ ಬ್ಯಾಟಿಂಗ್ ಲೈನ್ ಅಪ್ ಹೊಂದಿದ್ದು, ನಾಯಕ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಡಿ ವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಎದುರಾಳಿ ಬೌಲರುಗಳಿಗೆ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವುದೇ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ.

ಶೇನ್ ವಾಟ್ಸನ್ ಆಲ್‌ರೌಂಡರ್ ಆಗಿ ಮಿಂಚಿದ್ದಾರೆ. ಮಿಚೆಲ್ ಸ್ಟಾರ್ಕ್ ಆಡದಿರುವುದು ರಾಯಲ್ ತಂಡಕ್ಕೆ ಬೌಲಿಂಗ್ ದೌರ್ಬಲ್ಯವನ್ನು ಉಂಟುಮಾಡಿದೆ. ಆದರೆ ಬೌಲಿಂಗ್ ಪಡೆ ದುರ್ಬಲವೆನಿಸಿದ್ದರೂ ಕಳೆದ  ಎರಡು ಪಂದ್ಯಗಳಲ್ಲಿ  ಬೌಲರುಗಳು ಮಿಂಚಿದ್ದಾರೆ. 
 
ಪ್ರಸಕ್ತ ಸ್ಥಾನ- 3
ಆಡಿದ ಪಂದ್ಯಗಳು: 13
ಗಳಿಸಿದ ಪಾಯಿಂಟ್‌ಗಳು 14
ಮುಂದಿನ ಪಂದ್ಯ:  ಡೆಲ್ಲಿ ಡೇರ್‌ಡೆವಿಲ್ಸ್( ಮೇ 22, ರಾಯ್ಪುರ್)
ರನ್‌ರೈಸರ್ಸ್ ಹೈದರಾಬಾದ್ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಸೋತಿದ್ದರಿಂದ ವಿರಾಟ್ ಕೊಹ್ಲಿ ತಂಡಕ್ಕೆ ಸಮೀಕರಣ ಕಗ್ಗಂಟಾಗಿ ಪರಿಣಮಿಸಿದೆ. ಸ್ವಯಂ ಅರ್ಹತೆ ಗಳಿಸಲು ಅದು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ. ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ರಾಯಲ್ ಸೋತರೆ, ಗುಜರಾತ್ ಲಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೆ ಮತ್ತು ಸನ್ ರೈಸರ್ಸ್ ಹೈದರಾಬಾದ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗೆದ್ದರೆ ಮಾತ್ರ ಡೇರ್ ಡೆವಿಲ್ಸ್ ಪ್ಲೇಆಫ್ ಆಸೆ ಜೀವಂತವಾಗುಳಿಯುತ್ತದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಡಿಮೆ ರನ್ ರೇಟಿನ ಗುಜರಾತ್ ಲಯನ್ಸ್‌ಗೆ ಮುಂಬೈ ವಿರುದ್ಧ ಗೆಲುವಿನ ನಿರೀಕ್ಷೆ