Publish Date: Sun, 25 Jul 2021 (10:00 IST)
Updated Date: Sun, 25 Jul 2021 (10:01 IST)
ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಂದು ಭಾರತದ ಭರವಸೆಯ ಬಾಕ್ಸರ್ ಮೇರಿ ಕೋಮ್ ಸ್ಪರ್ಧಿಸಲಿದ್ದಾರೆ.
ಡೊಮಿನಿಕನ್ ರಿಪಬ್ಲಿಕ್ ನ ಹರ್ನಾಂಡಿಸ್ ವಿರುದ್ಧ ಮೇರಿ ಇಂದು 32 ನೇ ಸುತ್ತಿನ ಪಂದ್ಯದಲ್ಲಿ ಸೆಣಸಲಿದ್ದಾರೆ. ಇವರಿಬ್ಬರ ಗುದ್ದಾಟದ ಬಗ್ಗೆ ಭಾರತೀಯರಲ್ಲಿ ಭಾರೀ ನಿರೀಕ್ಷೆಯಿದೆ.
ಭಾರತದ ಪದಕ ಗೆಲ್ಲುವ ಭರವಸೆಯ ಆಟಗಾರ್ತಿಯಾಗಿರುವ ಮೇರಿ ಕೋಮ್ ಇಂದು ಗೆಲುವಿನ ಖಾತೆ ತೆರೆಯಬಹುದು ಎಂಬ ನಂಬಿಕೆಯಿದೆ. ಈ ಪಂದ್ಯ ಮಧ್ಯಾಹ್ನ 1.30 ಕ್ಕೆ ನಡೆಯಲಿದೆ.
Krishnaveni K
Publish Date: Sun, 25 Jul 2021 (10:00 IST)
Updated Date: Sun, 25 Jul 2021 (10:01 IST)