Select Your Language

Notifications

webdunia
webdunia
webdunia
webdunia

ಕಂಚಿನ ಹೋರಾಟದಲ್ಲಿ ಸೋತ ಮಹಿಳಾ ಹಾಕಿ ತಂಡ

ಕಂಚಿನ ಹೋರಾಟದಲ್ಲಿ ಸೋತ ಮಹಿಳಾ ಹಾಕಿ ತಂಡ
ಟೋಕಿಯೋ , ಶುಕ್ರವಾರ, 6 ಆಗಸ್ಟ್ 2021 (09:00 IST)
ಟೋಕಿಯೋ: ಪುರುಷರ ಹಾಕಿ ತಂಡದಂತೇ ಭಾರತ ಮಹಿಳಾ ಹಾಕಿ ತಂಡವೂ ಒಲಿಂಪಿಕ್ಸ್ ನಲ್ಲಿ ಕಂಚು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ.


ಇದೀಗ ಮುಕ್ತಾಯವಾದ ಕಂಚಿನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಬ್ರಿಟನ್ ಎದುರು ಭಾರತ 3-4 ಗೋಲುಗಳ ಅಂತರದಿಂದ ಸೋಲು ಅನುಭವಿಸಿದೆ.

ಆರಂಭದಲ್ಲಿ ಎರಡು ಗೋಲುಗಳಷ್ಟು ಹಿನ್ನಡೆ ಹೊಂದಿದ್ದ ಭಾರತದ ವನಿತೆಯರು ಬಳಿಕ ಮೂರು ಗೋಲುಗಳನ್ನು ಹೊಡೆದು ಮೊದಲಾರ್ಧದಲ್ಲೇ ಮುನ್ನಡೆ ಹೊಂದಿದ್ದರು. ಆದರೆ ದ್ವಿತೀಯಾರ್ಧದಲ್ಲಿ ಕಮ್ ಬ್ಯಾಕ್ ಮಾಡಿದ ಬ್ರಿಟನ್ ಮುನ್ನಡೆ ಕಾಯ್ದುಕೊಂಡಿತು. ಭಾರತದ ಪರ ಗುರುಜಿತ್ ಕೌರ್ ಎರಡು, ವಂದನಾ ಕತಾರಿಯಾ ಒಂದು ಗೋಲು ಗಳಿಸಿದರು. ಗೋಲ್ ಕೀಪರ್ ಸವಿತಾ ಮತ್ತೆ ಅದ್ಭುತ ತಡೆಗಳ ಮೂಲಕ ಗಮನ ಸೆಳೆದರು. ಭಾರತೀಯರು ಅಂತಿಮ ಕ್ಷಣದವರೆಗೂ ಹೋರಾಟ ನಡೆಸಿದರೂ ವಿಜಯಲಕ್ಷ್ಮಿ ಒಲಿಯಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಟೆಸ್ಟ್: ಮಳೆ ಕಾಟದ ನಡುವೆ ರಾಹುಲ್ ಬೊಂಬಾಟ್ ಆಟ