Select Your Language

Notifications

webdunia
webdunia
webdunia
webdunia

ಕಂಚಿನ ಹೋರಾಟದಲ್ಲಿ ಸೋತ ದೀಪಕ್ ಪೂನಿಯಾ

ಕಂಚಿನ ಹೋರಾಟದಲ್ಲಿ ಸೋತ ದೀಪಕ್ ಪೂನಿಯಾ
ಟೋಕಿಯೋ , ಗುರುವಾರ, 5 ಆಗಸ್ಟ್ 2021 (17:04 IST)
ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಒಂದೇ ದಿನ ಮೂರು ಪದಕ ಗೆಲ್ಲುವ ಭಾರತದ ಕನಸು ನನಸಾಗಲಿಲ್ಲ. 87 ಕೆ.ಜಿ. ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ದೀಪಕ್ ಪೂನಿಯಾ ಸೋತು ನಿರಾಸೆ ಅನುಭವಿಸಿದ್ದಾರೆ.


ನಿನ್ನೆ ಸೆಮಿಫೈನಲ್ ನಲ್ಲಿ ಸೋತಿದ್ದ ದೀಪಕ್ ಇಂದು ಮೈಲ್ಸ್ ಅಮಿನೆ ವಿರುದ್ಧ ಕಂಚಿನ ಪದಕಕ್ಕಾಗಿ ನಡೆದ ಪಂದ್ಯವಾಡಿದ್ದರು. ಈ ಪಂದ್ಯದಲ್ಲಿ ದೀಪಕ್ 2-4 ಅಂತರದಿಂದ ಸೋಲು ಅನುಭವಿಸಿದ್ದಾರೆ.

ಒಂದು ವೇಳೆ ದೀಪಕ್ ಗೆದ್ದಿದ್ದರೆ ಒಂದೇ ದಿನ ಭಾರತಕ್ಕೆ ಮೂರು ಪದಕ ಮತ್ತು ಕುಸ್ತಿಯಲ್ಲಿ ಸತತ ಎರಡು ಪದಕ ಗೆದ್ದ ಹಿರಿಮೆ ಸಿಗುತ್ತಿತ್ತು. ಆದರೆ ಅದೀಗ ಕೈತಪ್ಪಿ ಹೋಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವನೇಸಾ ಸೋಲಿನೊಂದಿಗೆ ವಿನೇಶ್ ಪೋಗಟ್ ಕಂಚಿನ ಕನಸೂ ಭಗ್ನ