ನವದೆಹಲಿ: ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತದ ಅಥ್ಲೆಟ್ ಗಳ ಮೊದಲ ಗುಂಪು ನಿನ್ನೆ ಪ್ರಯಾಣ ಬೆಳೆಸಿದೆ.
ಸ್ವತಃ ಕ್ರೀಡಾ ಸಚಿವ ಅನುರಾಗ್ ಠಾಕೂರ್ ದೆಹಲಿ ವಿಮಾನ ನಿಲ್ದಾಣದಲ್ಲಿ ಆಟಗಾರರಿಗೆ ಉರಿ ಸಿನಿಮಾ ಹೌ ಈಸ್ ಜೋಶ‍್ ಡೈಲಾಗ್ ಹೇಳಿ ಹುರಿದುಂಬಿಸಿ ಕಳುಹಿಸಿದ್ದಾರೆ.
ನಿನ್ನೆ ಪ್ರಯಾಣ ಬೆಳೆಸಿದ ತಂಡದಲ್ಲಿ ಆರ್ಚರಿ, ಟೇಬಲ್ ಟೆನಿಸ್, ಹಾಕಿ, ಬ್ಯಾಡ್ಮಿಂಟನ್, ಈಜು, ವೈಟ್ ಲಿಫ್ಟಿಂಗ್, ಜೂಡೋ, ಜಿಮ್ನಾಸ್ಟಿಕ್ ತಂಡದ ಅಥ್ಲೆಟ್ ಗಳು ಸೇರಿದ್ದಾರೆ. ಜುಲೈ 23 ರಿಂದ ಆಗಸ್ಟ್ 8 ರವರೆಗೆ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟ ನಡೆಯಲಿದೆ.