Select Your Language

Notifications

webdunia
webdunia
webdunia
webdunia

ಕಂಚಿನೊಂದಿಗೆ ಮನೆಗೆ ಬಂದ ಹಾಕಿ ವೀರರು: ಚಿನ್ನ ಗೆದ್ದಷ್ಟೇ ಖುಷಿಯಿದೆ ಎಂದ ಫೋಷಕರು

Hockey India

Sampriya

ಅಮೃತಸರ , ಭಾನುವಾರ, 11 ಆಗಸ್ಟ್ 2024 (16:38 IST)
Photo Courtesy X
ಅಮೃತಸರ: ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಕಂಚಿನ ಪದಕವನ್ನು ಗೆದ್ದ ನಂತರ, ಭಾರತೀಯ ಪುರುಷರ ಹಾಕಿ ತಂಡದ ಆಟಗಾರರಾದ ಹಾರ್ದಿಕ್ ಸಿಂಗ್ ಮನ್‌ದೀಪ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಮನ್‌ದೀಪ್ ಸಿಂಗ್ ಮತ್ತು ಗುರ್ಜಂತ್ ಸಿಂಗ್  ತಮ್ಮ ಊರಿಗೆ ಮರಳಿದರು.

ಗುರುವಾರ ನಡೆದ ಪಂದ್ಯದಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪಿಆರ್ ಶ್ರೀಜೇಶ್ ಅವರ ನೆರವಿನಿಂದ ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪೇನ್ ವಿರುದ್ಧ 2-1 ಗೋಲುಗಳಿಂದ ಕಂಚಿನ ಪದಕ ಲಭಿಸಿದೆ.

ಮಕ್ಕಳು ತಾಯ್ನಾಡಿಗೆ ಪದಕದೊಂದಿಗೆ ಮರಳಿರುವ ಖುಷಿಯನ್ನು ವ್ಯಕ್ತಪಡಿಸಿದ ಹಾರ್ದಿಗ್ ಸಿಂಗ್ ತಾಯಿ ಕಮಲ್‌ಜೀತ್ ಕೌರ್ ಅವರು, "ನಾವು ತುಂಬಾ ಹೆಮ್ಮೆಪಡುತ್ತೇವೆ. ನನ್ನ ಭಾವನೆಗಳನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ... ನಾವು ಪ್ಯಾರಿಸ್‌ನಲ್ಲಿ ತಂಡವನ್ನು ಬೆಂಬಲಿಸುತ್ತಿದ್ದೆವು ಮತ್ತು ಇಂದು ನಾವು ಅವರನ್ನು ಸ್ವಾಗತಿಸಲು ಒಟ್ಟುಗೂಡಿದ್ದೇವೆ" ಎಂದು ಖುಷಿ ವ್ಯಕ್ತಪಡಿಸಿದರು.

"ಒಲಿಂಪಿಕ್ಸ್‌ನಲ್ಲಿ ತಂಡವು ಕಂಚಿನ ಪದಕ ಗೆದ್ದಿರುವುದರಿಂದ ನನಗೆ ತುಂಬಾ ಸಂತೋಷವಾಗಿದೆ... ಎಲ್ಲರೂ ಅವರನ್ನು ಸ್ವಾಗತಿಸಲು ಕಾಯುತ್ತಿದ್ದಾರೆ..." ಎಂದು ಮನ್‌ದೀಪ್ ಸಿಂಗ್ ಅವರ ತಂದೆ ಹೇಳಿದರು.

ತಂಡವು ತಮ್ಮೊಂದಿಗೆ ಚಿನ್ನದ ಪದಕವನ್ನು ಮರಳಿ ತಂದಂತೆ ಭಾಸವಾಗುತ್ತಿದೆ ಎಂದು ಸುಖದೇವ್ ಸಿಂಗ್ ಅವರ ತಂದೆ ಅಜಿತ್ ಸಿಂಗ್ ಹೇಳಿದ್ದಾರೆ.

"ಅವರು ಗೆದ್ದು ಬಂದಿದ್ದಾರೆ, ಚಿನ್ನ ಗೆದ್ದಿದ್ದಾರೆ ಎಂಬ ಭಾವನೆ ಮೂಡುತ್ತಿದೆ. ತುಂಬಾ ಖುಷಿಯಾಗಿದೆ. ಬಂದ ಕೂಡಲೇ ನನ್ನ ಮಗ ಪದಕವನ್ನು ನನ್ನ ಕೊರಳಿಗೆ ಹಾಕಿದ್ದಾನೆ. ಇದಕ್ಕಿಂತ ದೊಡ್ಡ ಸಂತೋಷ ಇನ್ನೊಂದಿಲ್ಲ. ಇಡೀ ತಂಡಕ್ಕೆ ಅಭಿನಂದನೆಗಳು.  ದೇವರು ಅವರನ್ನು ಆಶೀರ್ವದಿಸಲಿ... ನಮ್ಮ ಆಸೆ ಈಗ ಈಡೇರಿದೆ, ಅವರು ನಮ್ಮ ದೇಶಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದಾರೆ... ನಮಗೆ ತುಂಬಾ ಸಂತೋಷವಾಗಿದೆ ಎಂದು ಅಜಿತ್ ಸಿಂಗ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಂಡ ಅಭಿನವ್‌ ಬಿಂದ್ರಾಗೆ ಪ್ಯಾರಿಸ್‌ನಲ್ಲಿ ದೊಡ್ಡ ಗೌರವ