Select Your Language

Notifications

webdunia
webdunia
webdunia
webdunia

ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಂಡ ಅಭಿನವ್‌ ಬಿಂದ್ರಾಗೆ ಪ್ಯಾರಿಸ್‌ನಲ್ಲಿ ದೊಡ್ಡ ಗೌರವ

Paris Olympics

Sampriya

ಪ್ಯಾರಿಸ್‌ , ಭಾನುವಾರ, 11 ಆಗಸ್ಟ್ 2024 (14:32 IST)
Photo Courtesy X
ಪ್ಯಾರಿಸ್‌: ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಚಿನ್ನದ ಪದಕ ತಂದುಕೊಟ್ಟ ಶೂಟರ್‌ ಅಭಿನವ್‌ ಬಿಂದ್ರಾ ಅವರಿಗೆ ಒಲಿಂಪಿಕ್‌ ಆರ್ಡರ್‌ ಗೌರವವನ್ನು ಶನಿವಾರ ತಡರಾತ್ರಿ ಪ್ರದಾನ ಮಾಡಲಾಯಿತು.

41 ವರ್ಷ ವಯಸ್ಸಿನ ಅಭಿನವ್ ಬಿಂದ್ರಾ ಅವರು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪುರುಷರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ಅವರು 2010 ರಿಂದ 2020ರವರೆಗೆ ಇಂಟರ್‌ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್‌ ಫೆಡರೇಷನ್‌ನ ಅಥ್ಲೀಟ್ಸ್ ಸಮಿತಿ ಸದಸ್ಯರಾಗಿದ್ದರು.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ 142 ನೇ ಅಧಿವೇಶನದಲ್ಲಿ ಬಿಂದ್ರಾಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಲಿಂಪಿಕ್ ಆಂದೋಲನಕ್ಕೆ ನೀಡಿದ ಗಣನೀಯ ಕೊಡುಗೆಗಾಗಿ ಅವರಿಗೆ ಈ ಗೌರವ ಸಂದಿದೆ.

ಪ್ಯಾರಿಸ್​ನಲ್ಲಿ ನಡೆದ 33ನೇ ಆವೃತ್ತಿಯ ಬೇಸಗೆ ಒಲಿಂಪಿಕ್ಸ್​ಗೆ ಭಾನುವಾರ ಅಧಿಕೃತವಾಗಿ ತೆರೆ ಬೀಳಲಿದೆ. ಕಳೆದ 17 ದಿನಗಳಿಂದ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದ ಸಮಾರೋಪ ಸಮಾರಂಭ ಪ್ಯಾರಿಸ್‌ನ ಹೃದಯ ಭಾಗವಾದ ಸ್ಟೇಡ್‌ ಡೆ ಫ್ರಾನ್ಸ್‌ ಸ್ಟೇಡಿಯಂನಲ್ಲಿ ನಡೆಯಲಿದೆ.

ಹಾಕಿ ಆಟಗಾರ ಪಿ.ಆರ್ ಶ್ರೀಜೇಶ್ ಮತ್ತು ಅವಳಿ ಕಂಚಿನ ಪದಕ ವಿಜೇತೆ ಶೂಟರ್​ ಮನು ಭಾಕರ್​ ಭಾರದ ಧ್ವಜಧಾರಿಗಳಾಗಿ ಪಥಸಂಚಲನದಲ್ಲಿ ಸಾಗಲಿದ್ದಾರೆ. ಭಾರತ ಈ ಬಾರಿ ಒಟ್ಟು 6 ಪದಕಗಳೊಂದಿಗೆ ತನ್ನ ಅಭಿಯಾನ ಮುಗಿಸಿತು. 1 ಬೆಳ್ಳಿ ಮತ್ತು 5 ಕಂಚು ಒಳಗೊಂಡಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ವಿನೋದ್ ಕಾಂಬ್ಳಿ ಎನ್ನಲಾದ ತೂರಾಡುತ್ತಿದ್ದ ವಿಡಿಯೋ ವೈರಲ್: ಮನೆಗೆ ಭೇಟಿ ನೀಡಿದ ಸ್ನೇಹಿತರು ಹೇಳಿದ್ದೇನು