Publish Date: Tue, 02 Aug 2022 (08:20 IST)
Updated Date: Tue, 02 Aug 2022 (08:57 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ನಿನ್ನೆಯ ದಿನ ಭಾರತ ಮೂರು ಪದಕ ಗೆದ್ದಿದ್ದು, ಮತ್ತೊಂದು ಪದಕ ಖಾತ್ರಿಗೊಳಿಸಿದೆ.
ಜೋಡೋದಲ್ಲಿ ಭಾರತಕ್ಕೆ ಒಂದು ಬೆಳ್ಳಿ, ಒಂದು ಕಂಚು ಸೇರಿದಂತೆ ಎರಡು ಪದಕ ಬಂದಿದೆ. ಜೋಡೋದಲ್ಲಿ ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಫೈನಲ್ ಗೇರಿದ ಸುಶೀಲಾ ದೇವಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇನ್ನು ಪುರುಷರ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಭಾರತದ ವಿಜಯ್ ಕುಮಾರ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ವೈಟ್ ಲಿಫ್ಟರ್ ಗಳು ನಿನ್ನೆಯೂ ಭಾರತದ ಪಾಲಿಗೆ ಅದೃಷ್ಟ ತಂದಿದ್ದಾರೆ. ಮಹಿಳೆಯರ 71 ಕೆ.ಜಿ. ವಿಭಾಗದಲ್ಲಿ ಹರ್ಜಿಂದರ್ ಕೌರ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಸಾಮಾನ್ಯ ರೈತನ ಮಗಳಾಗಿರುವ ಹರ್ಜಿಂದರ್ ಇದೇ ಮೊದಲ ಬಾರಿಗೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಒಟ್ಟು 212 ಕೆ.ಜಿ. ಭಾರ ಎತ್ತಿದ ಹರ್ಜಿಂದರ್ ಕಂಚು ಒಲಿಸಿಕೊಂಡಿದ್ದಾರೆ.