ಲಕ್ನೋ: ಇನ್ನೇನು ಟೋಕಿಯೋ ಒಲಿಂಪಿಕ್ಸ್ ಗೆ ಕೆಲವೇ ದಿನಗಳು ಬಾಕಿಯಿದ್ದು, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ತಮ್ಮ ರಾಜ್ಯದ ಕ್ರೀಡಾಪಟುಗಳಿಗೆ ಭರ್ಜರಿ ಆಫರ್ ಕೊಟ್ಟಿದೆ.
ಒಲಿಂಪಿಕ್ಸ್ ಪ್ರತಿನಿಧಿಸಿ ಚಿನ್ನದ ಪದಕ ಗೆದ್ದವರಿಗೆ ಉತ್ತರ ಪ್ರದೇಶ ಸರ್ಕಾರ ಒಟ್ಟು 6 ಕೋಟಿ ರೂ. ಮೀಸಲಿರಿಸಿದೆ. ಟೀಂ ಈವೆಂಟ್ ನಲ್ಲಿ ಗೆದ್ದವರಿಗಾಗಿ 3 ಕೋಟಿ ರೂ. ಮೀಸಲಿರಿಸಿದೆ.
ಒಂದು ವೇಳೆ ಚಿನ್ನದ ಪದಕ ಗೆದ್ದರೆ ಉತ್ತರ ಪ್ರದೇಶದ ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರೂ. ಸಿಗುವುದು ಗ್ಯಾರಂಟಿ. ಇದು ಒಲಿಂಪಿಕ್ಸ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಸ್ಪೂರ್ತಿ ಕೊಡುವುದಂತೂ ಗ್ಯಾರಂಟಿ.