Select Your Language

Notifications

webdunia
webdunia
webdunia
Wednesday, 9 April 2025
webdunia

ಸರ್ರೆ ಪರ ಕೌಂಟಿ ಆಡಲು ಶುರು ಮಾಡಿದ ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್
ಲಂಡನ್ , ಮಂಗಳವಾರ, 13 ಜುಲೈ 2021 (12:23 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸದಸ್ಯರಿಗೆ ಈಗ ಸುದೀರ್ಘ ಬ್ರೇಕ್ ಸಿಕ್ಕಿದೆ. ಈ ವಿರಾಮದ ಅವಧಿಯನ್ನು ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ.


ಹೆಚ್ಚಿನ ಕ್ರಿಕೆಟಿಗರು ತಮ್ಮ ಕುಟುಂಬಸ್ಥರ ಜೊತೆ ಫುಟ್ಬಾಲ್ ವೀಕ್ಷಣೆ, ಪ್ರವಾಸೀ ತಾಣಗಳ ವೀಕ್ಷಣೆಯಲ್ಲಿ ತೊಡಗಿದ್ದರೆ, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿ ನಡೆಸಿದ್ದಾರೆ.

ಸರ್ರೆ ಪರ ಕೌಂಟಿ ಕ್ರಿಕೆಟ್ ಆಡಲು ಆರಂಭಿಸಿರುವ ಅಶ್ವಿನ್ ಈ ಮೂಲಕ ಇಂಗ್ಲೆಂಡ್ ಸರಣಿಗೆ ಮುನ್ನ ಇಲ್ಲಿನ ಪಿಚ್ ಗೆ ಹೊಂದಿಕೊಳ್ಳಲು ತಯಾರಿ ನಡೆಸಿದ್ದಾರೆ. ಮೊದಲ ದಿನವೇ 28 ಓವರ್ ಗಳ ಬೌಲಿಂಗ್ ನಡೆಸಿ 1 ವಿಕೆಟ್ ಕೂಡಾ ಕಬಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೆಗೆಟಿವ್ ವರದಿ ಬಂದ ಲಂಕಾ ಕ್ರಿಕೆಟಿಗರು ಬಯೋ ಬಬಲ್ ಗೆ ಎಂಟ್ರಿ