ಲಂಡನ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಸುದೀರ್ಘ ಬ್ರೇಕ್ ಪಡೆದಿರುವ ಟೀಂ ಇಂಡಿಯಾ ಕ್ರಿಕೆಟಿಗರು ಇಷ್ಟು ದಿನ ತಮ್ಮ ಕುಟುಂಬದವರ ಜೊತೆ ಸುತ್ತಾಡುತ್ತಾ ಖುಷಿಯಾಗಿ ಕಾಲ ಕಳೆಯುತ್ತಿದ್ದರು.
ಆದರೆ ಇದೀಗ ಮತ್ತೆ ಕ್ರಿಕೆಟಿಗರಿಗೆ ಬಯೋ ಬಬಲ್ ದಿಗ್ಬಂಧನ ಶುರುವಾಗಲಿದೆ. ಜುಲೈ 7 ರಿಂದ 9 ರೊಳಗಾಗಿ ಎಲ್ಲಾ ಕ್ರಿಕೆಟಿಗರು ಎರಡನೇ ಹಂತದ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ. ಶನಿವಾರ ಎಲ್ಲಾ ಕ್ರಿಕೆಟಿಗರೂ ಹಾಗೂ ಕುಟುಂಬಸ್ಥರು ಕೊರೋನಾ ಪರೀಕ್ಷೆಗೊಳಗಾಗಿದ್ದಾರೆ.
ಇದರ ವರದಿ ಬಂದ ನಂತರ ನೆಗೆಟಿವ್ ವರದಿ ಬಂದ ಕ್ರಿಕೆಟಿಗರಿಗರೆಲ್ಲರೂ ಬಯೋ ಬಬಲ್ ವಾತಾವರಣದೊಳಕ್ಕೆ ಎಂಟ್ರಿಯಾಗಲಿದ್ದಾರೆ. ಇಲ್ಲಿ ಒಳ ಸೇರಿಕೊಂಡ ಮೇಲೆ ಹೊರಗಡೆ ಓಡಾಡುವಂತಿಲ್ಲ.