Select Your Language

Notifications

webdunia
webdunia
webdunia
webdunia

ವಿಶ್ವಗುರುವಾದ ಭಾರತ: ಚೆಸ್‌ ಒಲಿಂಪಿಯಾಡ್‌ನಲ್ಲಿ ಪುರುಷರ ತಂಡಕ್ಕೆ ಐತಿಹಾಸಿಕ ಚಿನ್ನದ ಪದಕ

45th Chess Olympiad

Sampriya

ಬುಡಾಪೆಸ್ಟ್‌ , ಭಾನುವಾರ, 22 ಸೆಪ್ಟಂಬರ್ 2024 (10:25 IST)
Photo Courtesy X
ಬುಡಾಪೆಸ್ಟ್‌: ಭಾರತದ ಪುರುಷರ ಚೆಸ್‌ ತಂಡವು ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದಿದೆ.

ಶನಿವಾರ ನಡೆದ ಹತ್ತನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ಗೆ ಚಾಲೆಂಜರ್‌ ಆಗಿರುವ ಡಿ. ಗುಕೇಶ್‌ ಮತ್ತು ಅರ್ಜುನ್ ಇರಿಗೇಶಿ ಅವರು ಯಶಸ್ಸಿನ ಓಟ ಮುಂದುವರಿಸಿದರು. ಭಾರತ 2.5- 1.5 ಪಾಯಿಂಟ್ಸ್‌ಗಳಿಂದ ಸೋಲಿಸಿ ಒಂದು ಸುತ್ತು ಉಳಿದಿರುವಂತೆ ಮೊದಲ ಬಾರಿ ಚಿನ್ನದ ಪದಕ ಜಯಿಸಿತು.

 ಇಂದು 11ನೇ ಮತ್ತು ಕೊನೆಯ ಸುತ್ತಿನ ಸ್ಪರ್ಧೆ ನಡೆಯಲಿದ್ದು, ಆದರೆ ಭಾರತ ಈಗಾಗಲೇ ಚಿನ್ನದ ಪದಕ ಖಚಿತಪಡಿಸಿಕೊಂಡಿದೆ. ಇದು ಭಾರತ ತಂಡಕ್ಕೆ ದೊರೆಯುತ್ತಿರುವ ಮೊದಲ ಚಿನ್ನದ ಪದಕವಾಗಿದೆ.

ಗುಕೇಶ್‌ ಅವರು ಫ್ಯಾಬಿಯಾನೊ ಕರುವಾನ ಅವರನ್ನು ಸೋಲಿಸಿದರೆ, ಅರ್ಜುನ್‌ ಅವರು ಲೆನಿಯರ್ ಡೊಮಿಂಗುಜ್ ಪೆರೆಜ್ ಅವರನ್ನು ಮಣಿಸಿದರು.  ವಿದಿತಿ ಗುಜರಾತಿ ಪ್ರಬಲ ಆಟವಾಡಿ ಲೆವೊನ್ ಅರೋನಿಯನ್ ಅವರ ಜೊತೆ ಡ್ರಾ ಮಾಡಿಕೊಂಡರು. ಆದರೆ, ಪ್ರಜ್ಞಾನಂದ ಅವರು ವೆಸ್ಲಿ ಸೋ ಅವರಿಗೆ ಮಣಿದರು.

ಮಹಿಳಾ ವಿಭಾಗದಲ್ಲಿ ಭಾರತ ತಂಡವು 2.5-1.5 ಅಂಕಗಳಿಂದ ಚೀನಾವನ್ನು ಸೋಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs BAN Test: ಬೆಳಿಗ್ಗೆಯೇ ಬ್ಯಾಟ್ ಗೆ ಪೂಜೆ ಸಲ್ಲಿಸಿದ್ದ ರಿಷಭ್ ಪಂತ್ ಗೆ ಮೋಸ ಮಾಡದ ಭಗವಂತ (Video)